- Advertisement -
![]()
- Advertisement -
ಹೈದರಾಬಾದ್ :ರಾಣಿಗುಂಜ್ ಏರಿಯಾದ ಸಾರ್ವಜನಿಕ ವಲಯದ ಬ್ಯಾಂಕ್ ಹತ್ತಿರ ಸ್ಪೆಷಲ್ ಪ್ರೊಟಕ್ಷನ್ ಪೋರ್ಸ್ (ಎಸ್ ಪಿ ಎಫ್)ನ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಪೊಲೀಸ್ ಒಬ್ಬರು, ಬಂದೂಕಿನಿಂದ ಮಿಸ್ ಫೈರಿಂಗ್ ಆಗಿ ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 31 ವರ್ಷದ ಸ್ಪೆಷಲ್ ಪ್ರೊಟಕ್ಷನ್ ಪೋರ್ಸ್ ನ ಕಾನ್ಸ್ ಟೇಬಲ್, ಸೆಲ್ಫ್ ಲೋಡಿಂಗ್ ರೈಫಲ್ ನಿಂದ ಮಿಸ್ ಫೈರಿಂಗ್ ಉಂಟಾಗಿ, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪ್ರಕರಣದ ಕುರಿತಂತೆ ಸೆಕ್ಯೂರಿಟಿ ಆಫೀಸರ್ ಇಂಚಾರ್ಜ್ ಇದ್ದಂತ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು, ಕಾನ್ಸ್ ಟೇಬಲ್ ಎಸ್ ಎಲ್ ಆರ್ ಬಂದೂಕಿನಿಂದ ಮಿಸ್ ಫೈರಿಂಗ್ ಆಗಿದ್ದರಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
- Advertisement -


