- Advertisement -
- Advertisement -
ಸುಳ್ಯ: ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ್ಪಂಗಾಯ ರವರ ನೇತೃತ್ವದಲ್ಲಿ ಅಜ್ಜಾವರ ಗ್ರಾಮದ ಮೇನಾಲ ವಾರ್ಡ್ ನಲ್ಲಿ ಗ್ರಾಮದಲ್ಲಿನ ಸುಮಾರು 120ಕ್ಕೂ ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ ರೈ ಉದ್ಘಾಟಿಸಿದರು.

ದಾನಿಗಳಾದ ವಿಠಲ್ ರಾವ್ ತುದಿಯಡ್ಕ, ರಾಮಣ್ಣ ಪೂಜಾರಿ ಕೊಡಂಬ, ಮಾಜಿ ಗ್ರಾಪಂ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಸುಧೀರ್ ರೈ ಮೇನಾಲ , ನಂದರಾಜ್ ಸಂಕೇಶ್, ರಂಜಿತ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀಧರ ಮೇನಾಲ, ಗ್ರಾಪಂ ಸದಸ್ಯ ದಾಮೋದರ ಮೇನಾಲ, ಮೊದಲಾದವರು ಉಪಸ್ಥಿತರಿದ್ದರು.



- Advertisement -