Saturday, June 13, 2026
Homeಕರಾವಳಿಜಿಲ್ಲಾ ಸಿಟಿ ಬಸ್ ಗಳಿಗೆ ಬಾಗಿಲು ಮುಚ್ಚುವ ಆದೇಶ; ಬಸ್ ಗಳಿಂದ ಆದೇಶ ಉಲ್ಲಂಘಣೆ

ಜಿಲ್ಲಾ ಸಿಟಿ ಬಸ್ ಗಳಿಗೆ ಬಾಗಿಲು ಮುಚ್ಚುವ ಆದೇಶ; ಬಸ್ ಗಳಿಂದ ಆದೇಶ ಉಲ್ಲಂಘಣೆ

- Advertisement -
- Advertisement -

ಮಂಗಳೂರು: ಜಿಲ್ಲಾಡಳಿತವು ಪ್ರಯಾಣಿಕರ ಸುರಕ್ಷತೆಗಾಗಿ ಬಸ್‌ಗಳ ಬಾಗಿಲುಗಳನ್ನು ಮುಚ್ಚುವುದನ್ನು ಕಡ್ಡಾಯಗೊಳಿಸುವಂತೆ ಒಂದು ವರ್ಷದ ಹಿಂದೆಯೇ ನಿರ್ದೇಶನ ಹೊರಡಿಸಿದ್ದರೂ, ಆದೇಶ ಮಾಡಿ ವರ್ಷ ಕಳೆದರು ಸುಮಾರು ಶೇ. 90 ಬಸ್‌ಗಳು ಇನ್ನೂ ಆದೇಶವನ್ನು ಪಾಲನೆ ಮಾಡಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಲಿಸುವ ಸಿಟಿ ಬಸ್‌ಗಳಲ್ಲಿ ಬಾಗಿಲುಗಳು ಇರದೇ ಇರುವುದು ಇದಕ್ಕೆ ಮುಖ್ಯ ಕಾರಣ. ಪ್ರಯಾಣಿಕರು ಮೆಟ್ಟಿಲಿನಲ್ಲಿ ನಿಂತು ನೇತಾಡುವುದರಿಂದ ಅಪಘಾತಗಳು ಸಂಭವಿಸಿದ್ದ ಹಿನ್ನಲೆ ಈ ನಿರ್ದೇಶನವನ್ನು ಜಿಲ್ಲಾಡಳಿತ ಹೊರಡಿಸಿತು. ಜಿಲ್ಲೆಯೊಳಗೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ನಡುವೆ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಕ್ಸ್‌ಪ್ರೆಸ್ ಮತ್ತು ಸರ್ವಿಸ್ ಬಸ್‌ಗಳಲ್ಲಿಯೂ ಸಹ, ಹೆಚ್ಚಿನವು ನಿಯಮವನ್ನು ಜಾರಿಗೆ ತಂದಿಲ್ಲ ಎಂದು ವರದಿಯಾಗಿದೆ. ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳು ಸಹ ನಿರ್ದೇಶನವನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.

- Advertisement -

Latest News

error: Content is protected !!