Friday, October 11, 2024
Homeಕರಾವಳಿಬೆಳ್ತಂಗಡಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ...

ಬೆಳ್ತಂಗಡಿ: ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ.

spot_img
- Advertisement -
- Advertisement -

ಬೆಳ್ತಂಗಡಿ: ಮೇಲಂತ ಬೆಟ್ಟು ಗ್ರಾಮದ ಮುಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ.ಈ ಬಾರಿಯ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಯಚೂರಿನ ಮಾನವಿಯ ಹರನಹಳ್ಳಿ ಸ.ಕಿ.ಪ್ರಾ ಶಾಲೆಗೆ 2002 ರಲ್ಲಿ ಶಿಕ್ಷಕರಾಗಿ ನೇಮಕಗೊಂಡು 2004ರಲ್ಲಿ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಸಿದ್ದಬೈಲು ಪರಾರಿ ಶಾಲೆಗೆ ವರ್ಗಾವಣೆಗೊಂಡರು. 2013ರಿಂದ ಮುಂಡಾಜೆ ಕ್ಲಸ್ಟರ್ ನ ಸಿಆರ್ ಪಿ ಯಾಗಿ ಸೇವೆ ಸಲ್ಲಿಸಿ, 2017ರಿಂದ ಮುಂಡೂರು ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ 21 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಲ್ಲೇಲಿಂಗನಹಳ್ಳಿ ಹಾಲಮ್ಮ ಹಾಗೂ ಬಸಪ್ಪ ದಂಪತಿಯ ಪುತ್ರ.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಿಂಗಟಗೆರೆಯಲ್ಲಿ ಟಿಸಿಎಚ್ ತರಬೇತಿಯನ್ನು ಬೆಂಗಳೂರಿನಲ್ಲಿ ಪದವಿಯನ್ನು ಮೈಸೂರಲ್ಲಿ ಪೂರೈಸಿ, ದೆಹಲಿಯ ಐಜಿಎನ್ ಒಯು ನಿಂದ ಬಿ.ಎಡ್ ತರಬೇತಿ ಪಡೆದಿದ್ದಾರೆ.

ಸಿಆರ್‌ ಪಿ ಯಾಗಿ ಕರ್ತವ್ಯ ನಿರ್ವಹಿಸುವ ವೇಳೆ ಶಿಕ್ಷಕರಿಗೆ ಅನೇಕ ತರಬೇತಿಗಳನ್ನು ನೀಡಿ ದ್ದಾರೆ.

ಮುಂಡೂರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಾಲೆ ಕೊಠಡಿಗಳು ಸುಣ್ಣಬಣ್ಣ ಕಾಣದೆ ಹಲವು ವರ್ಷಗಳಾಗಿತ್ತು. ಇವರು ಪ್ರಭಾರ ಮುಖ್ಯ ಶಿಕ್ಷಕರಾಗಿ ನೇಮಕಗೊಂಡ ಬಳಿಕ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಶಾಲೆಗೆ ಅನೇಕ ಮೂಲಭೂತ ಸೌಕರ್ಯಗಳು ದೊರಕಿವೆ.ಇವರ ಪತ್ನಿ ಸುಧಾ ಕೂಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!