Saturday, May 4, 2024
Homeತಾಜಾ ಸುದ್ದಿ'ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದವ ಪಠ್ಯ ನಿರ್ಧರಿಸುವುದು ದುರಂತವಲ್ಲವೆ?' ದಿನೇಶ್ ಗುಂಡೂರಾವ್ ಟ್ವೀಟ್

‘ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದವ ಪಠ್ಯ ನಿರ್ಧರಿಸುವುದು ದುರಂತವಲ್ಲವೆ?’ ದಿನೇಶ್ ಗುಂಡೂರಾವ್ ಟ್ವೀಟ್

spot_img
- Advertisement -
- Advertisement -

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ರೋಹಿತ್ ಚಕ್ರತೀರ್ಥ ವಿರುದ್ಧ ಕೆಂಡ ಕಾರಿದ್ದಾರೆ.


ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿಗಳ ಪಠ್ಯಪುಸ್ತಕ ವಿವಾದಗಳ ಕೇಂದ್ರ ಬಿಂದುವಾಗಿದೆ. ಒಂದೆಡೆ ಬ್ರಾಹ್ಮಣರೇ ತುಂಬಿರುವ ಪಠ್ಯಪುಸ್ತಕ ಸಮಿತಿ ಸಿದ್ಧಪಡಿಸಿರುವ ಪಠ್ಯಗಳಲ್ಲಿ ಬ್ರಾಹ್ಮಣೀಕರಣವನ್ನು ವಿದ್ಯಾರ್ಥಿಗಳ ತಲೆಗೆ ತುಂಬಲಾಗ್ತಿದೆ ಎಂಬ ವಾದವಿದ್ದರೆ, ಇನ್ನೊಂದೆಡೆ ರಾಷ್ಟ್ರಕವಿ ಕುವೆಂಪು, ಕನ್ನಡ ಧ್ವಜ ಸೇರಿದಂತೆ ಮಹನೀಯರಿಯು, ಗೌವಯುತ ವಸ್ತುಗಳಿಗೆ ಅವಮಾನ ಮಾಡಿದ ಆರೋಪವಿದೆ.


ಮಗದೊಂದು ಕಡೆ ಭಗತ್ ಸಿಂಗ್, ನಾರಾಯಣ ಗುರುಗಳ ಪಠ್ಯ ತೆಗೆದು ಹಾಕಿ ಆರೆಸೆಸ್ಟ್ ಸ್ಥಾಪಕ ಹೆಡ್ಡೆವಾರ್ ಭಾಷಣದ ಪಠ್ಯ ಸೇರಿಸಿ ಶಾಲಾ ಪಠ್ಯವನ್ನು ಕೇಸರೀಕರಣ ಮಾಡಿರುವ ದೂರುಗಳು ಇವೆ. ಈ ಎಲ್ಲಾ ಗೊಂದಲಗಳ ನಡುವೆ, ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ರೋಹಿತ್ ಚಕ್ರತೀರ್ಥ ವಿರುದ್ಧ ಕೆಂಡ ಕಾರಿದ್ದಾರೆ.


“ನಾಡಗೀತೆಗೆ ಅವಮಾನ ಮಾಡಿದ ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ ರೋಹಿತ್ ಚಕ್ರತೀರ್ಥ ಎಂಬ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ. ಇಂತಹ ವ್ಯಕ್ತಿ ವಿದ್ಯಾರ್ಥಿಗಳ ಪಠ್ಯ ನಿರ್ಧರಿಸುವುದು ದುರಂತವಲ್ಲವೆ?
ಮನಸ್ಸಿನಲ್ಲಿ ವಿಕೃತಿ ತುಂಬಿಕೊಂಡು ಧರ್ಮದ್ವೇಷದ ವಿಷ ಕಕ್ಕುವ ರೋಹಿತ್ ಚಕ್ರತೀರ್ಥನಂತಹವರನ್ನು ಪಠ್ಯ ಪುಸ್ತಕ ಪರಿಷ್ಕರಣೆಯ ಅಧ್ಯಕ್ಷನನ್ನಾಗಿ ಮಾಡಿದ ಸರ್ಕಾರದ ನಡೆ ಅತ್ಯಂತ ನಾಚಿಕೆಗೇಡು. ಅಧ್ಯಯನ ಇಲ್ಲದ, ಅತ್ತ ಅನುಭವ ಇಲ್ಲದ ರೋಹಿತ್‌ನಂತಹವರು ಈ ನಾಡಿನ ವಿದ್ಯಾರ್ಥಿಗಳು ಏನನ್ನು ಕಲಿಯಬೇಕು, ಏನನ್ನು ಕಲಿಯಬಾರದು ಎಂದು ನಿರ್ಧರಿಸಬೇಕೆ? ಹಿಂದಿನ ಸರ್ಕಾರಗಳು ಪಠ್ಯಪುಸ್ತಕ ಪರಿಷ್ಕರಿಸಲು ಲೇಖಕರನ್ನು, ಚಿಂತಕರನ್ನು ಹಾಗೂ ವಿಷಯ ತಜ್ಞರನ್ನು ಮುಖ್ಯಸ್ಥರನ್ನಾಗಿ ನೇಮಿಸುತ್ತಿದ್ದವು.


ಆದರೆ ಈಗಿನ ಸರ್ಕಾರ ಧರ್ಮದ ಅಫೀಮ್ ತಲೆಗೇರಿಸಿಕೊಂಡ ಶತಮೂರ್ಖನೊಬ್ಬನಿಗೆ ಪಠ್ಯ ಪುಸ್ತಕ ಪರಿಷ್ಕರಿಸುವ ಜವಾಬ್ದಾರಿ ನೀಡಿದೆ. ಮೂರ್ಖನ ಸಲಹೆಯ ಆಧಾರದಲ್ಲಿ ಇಂದಿನ ವಿದ್ಯಾರ್ಥಿಗಳು ಪಾಠ ಕಲಿಯಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಟ್ವಿಟ್ ನಲ್ಲಿ “ಜೀವ ವಿರೋಧಿ ವ್ಯಕ್ತಿಯೊಬ್ಬಮುಗ್ಧ ವಿದ್ಯಾರ್ಥಿಗಳ ತಲೆಗೆ ತುಂಬುವುದು ಜೀವ ವಿರೋಧಿ ತತ್ವಗಳನ್ನೆ ಹೊರತು ಒಳ್ಳೆಯ ಅಂಶಗಳನಲ್ಲ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಲಿಕಾ ವಿಷಯವನ್ನು ಜೀವನ ವಿರೋಧಿ ವ್ಯಕ್ತಿ ನಿರ್ಧರಿಸಲು ಹೊರಟಿರುವುದು ವಿಪರ್ಯಾಸ. ನಾಡಿನ ಪ್ರಜ್ಞಾವಂತ ಸಮುದಾಯ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಿದೆ ಎಂದು ದಿನೇಶ್ ಗುಂಡೂರಾವ್ ಕೆಂಡ ಕಾರಿದ್ದಾರೆ.

- Advertisement -
spot_img

Latest News

error: Content is protected !!