Sunday, June 7, 2026
Homeಕರಾವಳಿಮೋದಿಜೀ‌ ನೀವು ಮತ್ತೆ ಮಂಗಳೂರಿಗೆ ಬನ್ನಿ, ಇದ್ರಿಂದಾದರೂ ರಸ್ತೆ ಹೊಂಡಗಳು ಮುಚ್ಚಲಿ; ಮಂಗಳೂರಿನಲ್ಲಿ ಅಗಲಿದ ಗೆಳೆಯನಿಗಾಗಿ...

ಮೋದಿಜೀ‌ ನೀವು ಮತ್ತೆ ಮಂಗಳೂರಿಗೆ ಬನ್ನಿ, ಇದ್ರಿಂದಾದರೂ ರಸ್ತೆ ಹೊಂಡಗಳು ಮುಚ್ಚಲಿ; ಮಂಗಳೂರಿನಲ್ಲಿ ಅಗಲಿದ ಗೆಳೆಯನಿಗಾಗಿ ಸ್ನೇಹಿತನ ಏಕಾಂಗಿ‌ ಪ್ರತಿಭಟನೆ

- Advertisement -
- Advertisement -

ಮಂಗಳೂರು. ಕೆಲ ದಿನಗಳ ಹಿಂದೆ ಮಂಗಳೂರು ನಗರದ ರಸ್ತೆಯ ಅವ್ಯವಸ್ಥೆಯಿಂದಾಗಿ ಅಪಘಾತಕ್ಕೀಡಾಗಿ ಮೃತಪಟ್ಟ ಯುವಕನ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಮಂಗಳೂರಲ್ಲಿ ಏಕಾಂಗಿ ಪ್ರತಿಭಟನೆಯ ಮೂಲಕ ಗಮನ ಸೆಳೆದಿದ್ದ ಯುವಕ ಲಿಖಿತ್ ರೈ ನಿನ್ನೆ ಮತ್ತೆ ಪ್ರತಿಭಟನೆ ನಡೆಸಿದರು.

‘ಮೋದಿ ಹೆ ತೋ ಮುಮ್ಕಿನ್ ಹೆ’ ಎಂಬ ಬ್ಯಾನರ್ ಹಿಡಿದು ನಂತೂರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಲಿಖಿತ್‌ ರೈ ಪ್ರಧಾನಿ ಮೋದಿಯವರು ಮತ್ತು ಮಂಗಳೂರಿಗೆ ಬನ್ನಿ ಆ ಮೂಲಕವಾದರೂ ರಸ್ತೆಗಳ ಹೊಂಡ ಮುಚ್ಚಲಿ ಎಂದು ಆಗ್ರಹಿಸಿದರು.

‘ರಾಷ್ಟ್ರೀಯ ಹೆದ್ದಾರಿಗಳು, ನಗರದ ರಸ್ತೆಗಳು ಮತ್ತೆ ಹೊಂಡಗಳಿಂದ ತುಂಬಿದ್ದರೂ ಯಾರೂ ಕೇಳುವವರಿಲ್ಲ. ಕೆಲ ಸಮಯದ ಹಿಂದೆ ನಾನು ರಸ್ತೆಗಿಳಿದು ಪ್ರತಿಭಟಿಸಿದ ಬಳಿಕ ಕೆಲವೆಡೆ ರಸ್ತೆ ದುರಸ್ತಿ ಕಾರ್ಯ, ಹೊಂಡ ತುಂಬಿಸುವ ಕಾರ್ಯ ಮಾಡಲಾಗಿತ್ತು. ಮತ್ತೆ ಅದೇ ಪರಿಸ್ಥಿತಿ. ಮಾಡಿರುವ ಪ್ಯಾಚ್‌ವರ್ಕ್ ಎದ್ದು ಹೋಗಿದೆ. ಪ್ರಧಾನಿ ಮೋದಿಯವರು ಮಂಗಳೂರಿಗೆ ಬರುವಾಗ ಎರಡು ದಿನದಲ್ಲಿ ಅವರು ಬರುವ ಕೂಳೂರು ರಸ್ತೆಯನ್ನು ಮೇಕಪ್ ಮಾಡಿ ಚಂದ ಮಾಡಲಾಗಿತ್ತು. ಅದರ ಹಿಂದೆ ಅದೆಷ್ಟು ಸಮಯ ಆ ರಸ್ತೆಯನ್ನು ಕೇಳುವವರಿರಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ರು.

- Advertisement -

Latest News

error: Content is protected !!