Monday, April 29, 2024
Homeತಾಜಾ ಸುದ್ದಿಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ

ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಪತಿ

spot_img
- Advertisement -
- Advertisement -

ಪಾಟ್ನಾ: ಮದುವೆಯಾಗಿ ಏಳು ವರ್ಷದಿಂದ ಸಂಸಾರ ನಡೆಸುತ್ತಿದ್ದ ಗಂಡನೇ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿರುವ ಘಟನೆ ಬಿಹಾರದ ಸುಲ್ತಾನಪುರದಲ್ಲಿ ನಡೆದಿದೆ.

ಸುಲ್ತಾನ್​ಪುರ ನಿವಾಸಿ ಉತ್ತಮ್​ ಮಂಡಲ್​ ಕಳೆದ ಏಳು ವರ್ಷಗಳ ಹಿಂದೆ ಸಪ್ನಾ ಹೆಸರಿನ ಯುವತಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಮೇಲೆ ಸಪ್ನಾಳಿಗೆ ಬೇರೊಬ್ಬ ಯುವಕನೊಂದಿಗೆ ಪ್ರೀತಿ ಹುಟ್ಟಿದೆ. ರಾಜ್​ಕುಮಾರ್​ ಹೆಸರಿನ ಯುವಕನೊಂದಿಗೆ ಪ್ರೀತಿ ಗಾಢವಾಗಿ ಬೆಳೆದಿದೆ. ಈ ವಿಚಾರ ತಿಳಿದ ನಂತರ ಉತ್ತಮ್​ ಆಕೆಯೊಂದಿಗೆ ಜಗಳವಾಡಿದ್ದಾನೆ. ಆದರೆ ಎಷ್ಟೆಂದರೂ ಕೇಳದ ಸ್ವಪ್ನಾ ಅವನನ್ನೇ ಪ್ರೀತಿಸುವುದಾಗಿ ವಾದಿಸಿದ್ದಾಳೆ.

ಸ್ವಪ್ನಾಳ ತಂದೆ ತಾಯಿಗೂ ಈ ವಿಚಾರ ತಿಳಿಸಿದ ಉತ್ತಮ್​, ಆಕೆಗೆ ಬುದ್ಧಿ ಹೇಳಿಸುವ ಪ್ರಯತ್ನ ಮಾಡಿದ್ದಾನೆ. ಯಾವುದಕ್ಕೂ ಬಗ್ಗದಿದ್ದಾಗ ಖುದ್ದು ತಾನೇ ಆಕೆಗೆ ಮತ್ತೊಂದು ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಮನೆ ಹತ್ತಿರದ ದುರ್ಗಾ ಸ್ಥಳದಲ್ಲಿ ರಾಜ್​ಕುಮಾರ್​ ಮತ್ತು ಸ್ವಪ್ನಾ ಮದುವೆ ಮಾಡಿಸಿದ್ದಾನೆ. ಉತ್ತಮ್ ಸ್ವಪ್ನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಇದೀಗ ಆ ಇಬ್ಬರು ಮಕ್ಕಳು ಅಪ್ಪನೊಂದಿಗಿದ್ದಾರೆ.

- Advertisement -
spot_img

Latest News

error: Content is protected !!