ನೆಲ್ಯಾಡಿ : ಡಿಸೇಲ್ ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ, ಟ್ಯಾಂಕ್‌ನಿಂದ ಡಿಸೇಲ್ ಸೋರಿಕೆಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಟರ್ನ್‌ನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಚತುಸ್ಪಥ ರಸ್ತೆಯ ಕಾಮಗಾರಿಯಿಂದಾಗಿ ತೀರ ಹದಗೆಟ್ಟ ರಸ್ತೆಯಲ್ಲಿ ಸಾಗುವಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದ್ದು, ಸಾವಿರಾರು ಲೀಟರ್ ಡಿಸೇಲ್ ರಸ್ತೆಯ ಮೇಲೆ ಹರಿದಿದೆ. ಆದರೆ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಹಾಸನ ಕಡೆಗೆ ಡಿಸೇಲ್ ತುಂಬಿಕೊಂಡು ಟ್ಯಾಂಕರ್ ತೆರಳುತ್ತಿತ್ತು. ಘಟನೆಯಿಂದ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ವ್ಯತ್ಯಯವಾಗಿತ್ತು.
ಉರುಳಿದ ಟ್ಯಾಂಕರ್‌ನಿಂದ ಕೆಲ ಕಿಡಿಗೇಡಿಗಳು ಡಿಸೇಲ್ ತುಂಬಿಸಲು ಯತ್ನಿಸಿದ್ದು, ಲಾರಿಯ ಮಾಲಕರು ಮತ್ತು ಕಿಡಿಗೇಡಿಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆಯು ನಡೆಯಿತು. ನಂತರ ಪೋಲಿಸರ ಆಗಮನದಿಂದ ಪರಿಸ್ಥಿತಿ ಶಾಂತವಾಯಿತು.

ರಸ್ತೆ ಕಾಮಗಾರಿಯವರ ಬೇಜವಾಬ್ಧಾರಿಯಿಂದ ಘಟನೆ
ಈ ಸ್ಥಳದಲ್ಲಿ ರಸ್ತೆ ಕಾಮಗಾರಿಗಾಗಿ ದೊಡ್ದದಾದ ಬಂಡೆಕಲ್ಲೊಂದನ್ನು ಸ್ಟೋಟಿಸಲಾಗಿದ್ದು, ಆದರ ಕಲ್ಲಿನ ತುಂಡುಗಳನ್ನು ಮತ್ತು ಮಣ್ಣುಗಳನ್ನು ರಸ್ತೆಗೆ ಹೊಂದಿಕೊಂಡಿರುವಂತೆ ರಾಶಿ ಹಾಕಲಾಗಿದೆ. ರಾತ್ರಿ ವೇಳೆಯಲ್ಲಿ ಸಂಚಾರಿಸುವ ವಾಹನಗಳಿಗೆ ಇದು ಸ್ಪಷ್ಟವಾಗಿ ಗೋಚರಿಸದೇ ಇರುವುದರಿಂದಲೇ ಈ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.