Thursday, June 4, 2026
Homeತಾಜಾ ಸುದ್ದಿಡೀಸೆಲ್ ಬೆಲೆ 25 ರೂ. ಏರಿಕೆ: ವಾಹನ ಸವಾರರಿಗೆ ನೋ ವರಿ!

ಡೀಸೆಲ್ ಬೆಲೆ 25 ರೂ. ಏರಿಕೆ: ವಾಹನ ಸವಾರರಿಗೆ ನೋ ವರಿ!

- Advertisement -
- Advertisement -

ನವದೆಹಲಿ: ಡೀಸೆಲ್ ದರ ಲೀಟರ್ ಗೆ 25 ರೂಪಾಯಿ ಏರಿಕೆಯಾಗಿದೆ. ಆದರೆ ಈ ಬೆಲೆ ಏರಿಕೆ ಬಿಸಿ ವಾಹನ ಸವಾರರಿಗೆ ಸದ್ಯಕ್ಕೆ ತಟ್ಟುವುದಿಲ್ಲ. ಯಾಕೆಂದರೆ ಬೆಲೆ ಏರಿಕೆ ಸಗಟು ಮಾರಾಟಗಾರರಿಗಷ್ಟೇ ಅನ್ವಯವಾಗಲಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಡೀಸೆಲ್ ಸಗಟು ಮಾರಾಟ ಬೆಲೆಯಲ್ಲಿ ಪ್ರತೀ ಲೀಟರಿಗೆ 25 ರೂಪಾಯಿ ಹೆಚ್ಚಳವಾಗಿದೆ.

ಆದರೆ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದ ಕಾರಣ ವಾಹನ ಮಾಲೀಕರಿಗೆ ಸದ್ಯಕ್ಕೆ ಬೆಲೆ ಏರಿಕೆ ತಲೆ ಬಿಸಿ ಇಲ್ಲದಂತಾಗಿದೆ.

- Advertisement -

Latest News

error: Content is protected !!