Monday, June 29, 2026
Homeಮನರಂಜನೆತಮ್ಮನ ಪತ್ನಿಯ ಜೊತೆ ಹೆಜ್ಜೆ ಚಿರು ಹೆಜ್ಜೆ ಹಾಕಿದ ವಿಡಿಯೋ ವೈರಲ್

ತಮ್ಮನ ಪತ್ನಿಯ ಜೊತೆ ಹೆಜ್ಜೆ ಚಿರು ಹೆಜ್ಜೆ ಹಾಕಿದ ವಿಡಿಯೋ ವೈರಲ್

- Advertisement -
- Advertisement -

ಬೆಂಗಳೂರು : ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನು ಅಗಲಿ ತಿಂಗಳಾಗುತ್ತಾ ಬಂದರು ಅವರನ್ನು ಮರೆಯೋದಕ್ಕೆ ಯಾರಿಗೂ ಸಾಧ್ಯವಾಗುತ್ತಿಲ್ಲ. ಚಿರಂಜೀವಿ ಸರ್ಜಾ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದವರು. ಶೂಟಿಂಗ್ ಇಲ್ಲ ಅಂದ್ರೆ ಅವರು ಮನೆ ಬಿಟ್ಟು ಆಚೆ ಹೋಗುತ್ತಿರಲಿಲ್ಲ. ಮನೆ ಮಂದಿಯೊಂದಿಗೆ ಕಾಲ ಕಳೆಯುತ್ತಿದ್ದರು.

ಅದರಲ್ಲೂ ತಮ್ಮ ಪತ್ನಿ ಣೇಘನಾ ರಾಜ್, ತಮ್ಮ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಈ ನಾಲ್ಕು ಜನ ಒಟ್ಟಿಗೆ ಸೇರಿದ್ರೆ ಏನಾದ್ರೂ ಮಾಡುತ್ತಾ ಆ ಸುಂದರ ಕ್ಷಣಗಳನ್ನು ವಿಡಿಯೋ ಮಾಡಿ ಎಂಜಾಯ್ ಮಾಡುತ್ತಿದ್ದರು. ಇದೀಗ ಚಿರಂಜೀವಿ ಸರ್ಜಾ ಅವರು ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಪ್ರೇರಣಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ನನ್ನಲ್ಲಿರುವ ಅತ್ಯಂತ ಅಮೂಲ್ಯವಾದ ಚಿರು ಅವರ ವಿಡಿಯೋ ಇದು ಅಂತಾ ಹೇಳಿದ್ದಾರೆ ಪ್ರೇರಣಾ. ನಿಜಕ್ಕೂ ವಿಡಿಯೋ ನೋಡಿದ್ರೆ ಇಂತಹ ಮುದ್ದಾದ ಕುಟುಂಬದ ಮೇಲೆ ಯಾರ ಕಣ್ಣು ಬಿತ್ತೋ ಅಂತಾ ಅನ್ಸದೇ ಇರೋದಿಲ್ಲ. ಮನೆಯವರೊಂದಿಗೆ ಚಿರು ಬಾಂಧವ್ಯ ಹೇಗಿತ್ತು ಅನ್ನೋದನ್ನು ಈ ವಿಡಿಯೋ ಹೇಳುತ್ತೆ.

https://www.instagram.com/p/CCFXWKDlXkH/?igshid=90314ho23dar

- Advertisement -

Latest News

error: Content is protected !!