ಬೆಂಗಳೂರು: ಕರೋನಾ ರೋಗ ಜಾಗತಿಕವಾಗಿ ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಈ ನಡುವೆ ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಚಿಂತನೆ ನಡೆದಿದೆಯಾ ಎಂಬ ಬಗ್ಗೆ ಅಲ್ಲಲ್ಲಿ ಮಾತುಗಳು ಕೇಳಿ ಬಂದಿವೆ. ಇತ್ತ ಅತೀ ದೊಡ್ಡ ಸಾಮಾಜಿಕ ಬದಲಾವಣೆಗೆ ಕಾರಣವಾಗಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನ ಜಾಗೃತಿ ವೇದಿಕೆ ಜಂಟಿಯಾಗಿ ನಡೆಸಿದ ಸರ್ವೇ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ವೇ ನಡೆಸಿದ್ದು ಸುಮಾರು 10000 ಮಂದಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏನಿದೆ ರಿಪೋರ್ಟ್..?
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಲ್. ಎಚ್. ಮಂಜುನಾಥ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸರ್ವೆಯಲ್ಲಿ ಜನರು ಮದ್ಯ ನಿಲ್ಲಿಸಿದ್ದು ಒಳ್ಳೆಯದೇ ಆಗಿದೆ. ಮದ್ಯ ಕುಡಿಯದ ಕಾರಣ ಮನೆ ಮತ್ತು ಗ್ರಾಮದಲ್ಲಿ ಶಾಂತಿ, ಪ್ರೀತಿ ಇದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಶೇ.60ರಷ್ಟು ಜನ ಒಳ್ಳೆಯದಾಗಿದೆ ಎಂದಿದ್ದಾರೆ. ಇನ್ನೂ ಶೇ.30ರಷ್ಟು ಜನ ತುಂಬಾ ಒಳ್ಳೆಯದಾಗಿದೆ. ಮದ್ಯ ಸಿಗದ ಕಾರಣ ಮನೆಗಳಲ್ಲಿ ಸಂತೋಷ ಹೆಚ್ಚಾಗಿದೆ. ನೆಮ್ಮದಿ ಇದೆ. ಸಮಸ್ಯೆ ಏನೂ ಇಲ್ಲ. ಆದರೆ ಶೇ.47ರಷ್ಟು ಜನರ ನಡವಳಿಕೆ ಬದಲಾವಣೆ ಆಗಿದೆ ಎಂದು ಸರ್ವೇಯಲ್ಲಿ ತಿಳಿದು ಬಂದಿದೆ.
ಹೀಗಾಗಿ ಹೇಗೂ ಜನ ಕರೋನಾ ಕಾರಣ ಮದ್ಯ ನೆನಪು ಬಿಟ್ಟಿದ್ದಾರೆ. ಸಹಜವಾಗಿ ಮದ್ಯ ಬಿಟ್ಟವರು ಮನೆಯವರ ಮೇಲೆ ಪ್ರೀತಿ ಹೊಂದಿದ್ದಾರೆ. ಶಾಶ್ವತವಾಗಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಬೇಕು ಎಂಬ ಆಗ್ರಹ ಇದೀಗ ವ್ಯಕ್ತವಾಗಿದೆ.
ಮದ್ಯದಿಂದ ಸರ್ಕಾರದ ಆದಾಯಕ್ಕೆ ಲಾಭ ಇದೆ.ಆದರೆ ಅದರ ಎರಡು ಪಟ್ಟು ಸಾಮಾಜಿಕ ಸ್ವಾಸ್ತ್ಯ ಹಾಳಾಗುತ್ತಿದೆ. ಇದರಿಂದ ಸರ್ಕಾರ, ಜನರಿಗೂ ತುಂಬಾ ನಷ್ಟ ಆಗಲಿದೆ ಎಂಬ ಚರ್ಚೆ ನಡೆಯುತ್ತಿದೆ.