- Advertisement -
- Advertisement -
ವಿಟ್ಲ ಎ-22: ಕರೋಪಾಡಿ ಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಬುಧವಾರ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಬಂಟ್ವಾಳದಿಂದ ವಿಶೇಷ ತಂಡ ಬಂಟ್ವಾಳ ಆಸ್ಪತ್ರೆಗೆ ದಾಖಲಿಸಿದೆ. ಸುಮಾರು 50 ವರ್ಷ ಪ್ರಾಯ ಮಹಿಳೆಯೊಬ್ಬರಿಗೆ ಮಧ್ಯಾಹ್ನದ ಸಮಯ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ. ಸ್ಥಳೀಯ ಆಸ್ಪತ್ರೆಯವರ ಮಾಹಿತಿ ಪ್ರಕಾರ ಬಂಟ್ವಾಳದಿಂದ ಆಗಮಿಸಿದ ವಿಶೇಷ ತಂಡ ಅವರನ್ನು ಬಂಟ್ವಾಳ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದಾರೆ. ಎರಡು ವರ್ಷಗಳಿಂದ ಇವರಿಗೆ ಉಸಿರಾಟದ ಸಮಸ್ಯೆ ಆಗಾಗ್ಗೆ ಉಂಟಾಗುತ್ತಿತ್ತು ಎನ್ನಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ ಕರೊನಾ ಪ್ರಕರಣಗಳು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಮೇಲೆ ನಿಗಾ ಇಡಲಾಗಿದೆ.
- Advertisement -