ಬೆಳ್ತಂಗಡಿ: ಬಂಟ್ವಾಳದಲ್ಲಿ ಕೊರೋನಾ ಸೋಂಕಿನಿಂದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಸಾಮೇದಕಲಪುವಿನ ಒಂದೇ ಕುಟುಂಬದ ಮಕ್ಕಳು ಸೇರಿದಂತೆ 9 ಮಂದಿಯನ್ನು ನೆರಿಯ ಆಸ್ಪತ್ರೆಯ ವೈದ್ಯರ ತಂಡ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿದೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆ ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಆರೈಕೆ ಮಾಡಿದ್ದ ನರ್ಸ್ ಒಬ್ಬರ ಗಂಡನ ಮನೆ ಪುದುವೆಟ್ಟಿನ ಸಾಮೇದಕಲಪದವರಾಗಿದ್ದು, ಅವರು ಗಂಡನ ಮನೆಗೆ ಬಂದು ಹೋಗಿದ್ದರು. ಇದೀಗ ಸೋಂಕಿತ ಮಹಿಳೆ ಮೃತಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆ ನೀಡಿದ್ದ ದಾದಿಯನ್ನು ಬಂಟ್ವಾಳದಲ್ಲೇ ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಇತ್ತ ನರ್ಸ್ ಬಂದು ಹೋದ ಪತಿಯ ಮನೆ ಪುದುವೆಟ್ಟಿನ ಸಾಮೇದಕಲಪುವಿನ ಒಂದೇ ಕುಟುಂಬದ 9 ತಿಂಗಳ ಮಗು, ಮೂರು ಮಂದಿ ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ. ತಾಲೂಕಿನಿಂದ 84 ಸ್ಯಾಂಪಲ್ ಪರೀಕ್ಷೆಗೆ ರವಾನಿಸಲಾಗಿದೆ. 7 ದಿನದಿಂದ ಜ್ವರ ,ಶೀತ ಇದ್ದವರ ಮಾಹಿತಿ ಪಡೆಯಲಾಗುತ್ತಿದೆ.
ಮಾ 10 ರಿಂದ 234 ಮಂದಿ ಹೋಂ ಕ್ವಾರಂಟೈನ್ ನಲ್ಲಿದ್ದು ಇದರಲ್ಲಿ 230 ಮಂದಿಯ 28 ದಿನ ಪೂರ್ಣಗೊಂಡಿದೆ. 4 ಮಂದಿ ಉಳಿದುಕೊಂಡಿದ್ದಾರೆ ಎಂದು ತಾಲೂಕು ಅರೋಗ್ಯಾಧಿಕಾರಿ ತಿಳಿಸಿದ್ದಾರೆ.