Monday, March 17, 2025
Homeಕರಾವಳಿಧರ್ಮಸ್ಥಳದಲ್ಲಿ ದಿನೇಶ್ ಕೊಲೆ ಪ್ರಕರಣ, ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಮತ್ತು ತಂಡದಿಂದ ಆರೋಪಿಯ ಬಂಧನ

ಧರ್ಮಸ್ಥಳದಲ್ಲಿ ದಿನೇಶ್ ಕೊಲೆ ಪ್ರಕರಣ, ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಮತ್ತು ತಂಡದಿಂದ ಆರೋಪಿಯ ಬಂಧನ

spot_img
- Advertisement -
- Advertisement -

ಧರ್ಮಸ್ಥಳ : ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಗಲಾಟೆ ಆಗಿ ಅಂಗಡಿ ಮಾಲಕನಾದ ಕೃಷ್ಣ.ಡಿ @ ಕಿಟ್ಟ ನಿಂದ ದಿನೇಶ್ ನಾಯ್ಕ್ ಎಂಬಾತನಿಗೆ ಹಲ್ಲೆ ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಫೇ 25 ರಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದು ಈ ಬಗ್ಗೆ ದಿನೇಶ್ ತಾಯಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಪೊಲೀಸರು ಕೊಲೆ‌ ಪ್ರಕರಣ ದಾಖಲಿಸಿಕೊಂಡಿದ್ದರು.

ಇಂದು ಆರೋಪಿ ಕೃಷ್ಣ.ಡಿ @ ಕಿಟ್ಟ ಪರಾರಿಯಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ತಂಡದ‌ ಪ್ರಶಾಂತ್ , ಅಸ್ಲಾಮ್, ರಾಹುಲ್ , ಬೆನ್ನಿಚ್ಚನ್ , ಬಿಜು, ಸತೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!