Sunday, May 19, 2024
Homeತಾಜಾ ಸುದ್ದಿಉಜಿರೆಯಿಂದ ಮೂಡಿಗೆರೆ ಕಡೆಗೆ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ: 33 ಕ್ವಿಂಟಾಲ್ ‌ಅಕ್ಕಿ, ಬೊಲೆರೋ...

ಉಜಿರೆಯಿಂದ ಮೂಡಿಗೆರೆ ಕಡೆಗೆ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ: 33 ಕ್ವಿಂಟಾಲ್ ‌ಅಕ್ಕಿ, ಬೊಲೆರೋ ವಾಹನ ವಶ:  ಒಬ್ಬನನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

spot_img
- Advertisement -
- Advertisement -

ಬೆಳ್ತಂಗಡಿ : ಉಜಿರೆ ಕಡೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಡೆಗೆ ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಗೆ ಸಿಕ್ಕಿದ ಮಾಹಿತಿ ಮೇರೆಗೆ ಬುಧವಾರ ಬೆಳಗ್ಗೆ ಚಾರ್ಮಾಡಿ ಚೆಕ್ ಪೋಸ್ಟ್ ಬಳಿ ಬೊಲೆರೋ ಪಿಕಪ್ ವಾಹನ KA 18 C 5086 ನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಯಾವುದೇ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ವಾಹನ ಚಾಲಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದ ವಿನಯ್(23)ನನ್ನು ಬಂಧಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಆಹಾರ ನಿರೀಕ್ಷಕರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯ್ತು. ಈ ವೇಳೆ 2022 ನೇ ಮೇ ತಿಂಗಳ ಅನ್ನಭಾಗ್ಯ ಅಕ್ಕಿ ಯೋಜನೆಯಡಿ ಪಡಿತರ ಚೀಟಿದಾರರಿಗೆ ವಿತರಣೆಗಾಗಿ ನ್ಯಾಯಬೆಲೆ ಅಂಗಡಿಯ ಸರಬರಾಜು ನೀಡಿರುವ ಅಕ್ಕಿಗೆ ಹೋಲಿಕೆ ಇರುವುದು ಕಂಡುಬಂದಿದೆ.

ಸದ್ರಿ ವಾಹನದಲ್ಲಿ 59 ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತಲಾ 50 ಕೆಜಿ ಅಕ್ಕಿ ತುಂಬಿದ ಮೂಟೆ ಮತ್ತು 14 ಪ್ಲಾಸ್ಟಿಕ್ ಗೋಣಿಯಲ್ಲಿ ತಲಾ 25 ಕೆಜಿ ತುಂಬಿದ ಅಕ್ಕಿಯಂತೆ ಒಟ್ಟು 33 ಕ್ಲಿಂಟಾಲ್ ಅಕ್ಕಿ ಪತ್ತೆಯಾಗಿದೆ. ಅಕ್ಕಿಯ ಅಂದಾಜು ಮೌಲ್ಯ 49,500/- ಹಾಗೂ ಸಾಗಾಟಕ್ಕೆ ಉಪಯೋಗಿಸಲು ಬಳಸಿದ ಬೋಲೆರೋ ಪಿಕಪ್ ವಾಹನದ ಮೌಲ್ಯ ಐದು ಲಕ್ಷ ರೂಪಾಯಿ ಆಗಿದೆ.

ಅಕ್ಕಿಯನ್ನು ಅಕ್ರಮವಾಗಿ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಕಂಡುಬಂದಿದೆ. ಆರೋಪಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ಸಿಬ್ಬಂದಿಗಳಾದ ಮಹಮ್ಮದ್ ಅಸ್ಲಾಂ , ರಾಹುಲ್ ರಾವ್ , ಮುತ್ತಪ್ಪ ಗೋಡಿ, ಲಿಂಗಪ್ಪ ಕಾರ್ಯಾಚರಣೆ ಭಾಗವಹಸಿದರು.

- Advertisement -
spot_img

Latest News

error: Content is protected !!