Thursday, June 4, 2026
Homeಕರಾವಳಿಮಂಗಳೂರು: ದೈವ ನರ್ತನ ಮುಗಿಸುತ್ತಿದ್ದಂತೆಯೇ ಹೃದಯಾಘಾತದಿಂದ ಮೃತಪಟ್ಟ ದೈವ ನರ್ತಕ

ಮಂಗಳೂರು: ದೈವ ನರ್ತನ ಮುಗಿಸುತ್ತಿದ್ದಂತೆಯೇ ಹೃದಯಾಘಾತದಿಂದ ಮೃತಪಟ್ಟ ದೈವ ನರ್ತಕ

- Advertisement -
- Advertisement -

ಮಂಗಳೂರು: ದೈವ ನರ್ತಕರೊಬ್ಬರು ದೈವ ನರ್ತನ ಮುಗಿಸುತ್ತಿದ್ದಂತೆಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಪದವಿನಂಗಡಿಯ ಗಂಧಕಾಡು ನಿವಾಸಿ ಅಶೋಕ್ ಬಂಗೇರ(47) ಸಾವನ್ನಪ್ಪಿದ ದೈವ ನರ್ತಕರಾಗಿದ್ದು,
ದೈವ ನರ್ತನ ಮುಗಿಸುತ್ತಿದ್ದಂತೆಯೇ ಎದೆ ನೋವು ಕಾಣಿಸಿಕೊಂಡಿದೆ.

ಆಸ್ಪತ್ರೆಗೆ ಸಾಗಿಸುತ್ತಿದ್ದಂತೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದು, ನಿನ್ನೆ ಹಳೆಯಂಗಡಿ ಸಮೀಪ ನಡೆದ ರಕ್ತೇಶ್ವರಿ ದೈವ ನೇಮದಲ್ಲಿ ಘಟನೆ ನಡೆದಿದೆ.

ಹಳೆಯಂಗಡಿ ಕೊಳುವೈಲು ರೆಂಜದಡಿ ಕುಟುಂಬಸ್ಥರ ದೈವಸ್ಥಾನದಲ್ಲಿ ನಡೆದ ರಕ್ತೇಶ್ವರಿ ದೈವದ ನೇಮ ನಿನ್ನೆ ನಡೆದಿತ್ತು.

ನೇಮದ ವೇಳೆ ಎದೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ನೇಮ ಅರ್ಧಕ್ಕೆ ನಿಲ್ಲಿಸಿ ಅಶೋಕ್ ಬಂಗೇರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

- Advertisement -

Latest News

error: Content is protected !!