Saturday, June 6, 2026
Homeಕರಾವಳಿದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡ ಚಿತ್ರ ‘ಪುರುಷೋತ್ತಮನ ಪ್ರಸಂಗ’ ಇಂದು ತೆರೆಗೆ

ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡ ಚಿತ್ರ ‘ಪುರುಷೋತ್ತಮನ ಪ್ರಸಂಗ’ ಇಂದು ತೆರೆಗೆ

- Advertisement -
- Advertisement -

ದೇವದಾಸ್ ಕಾಪಿಕಾಡ್ ನಿರ್ದೇಶನದ “ಪುರುಷೋತ್ತಮ ಪ್ರಸಂಗ’ ಚಿತ್ರ ಇಂದು ತೆರೆಕಾಣುತ್ತಿದೆ. ತಮ್ಮ ಅದ್ಭುತ ಕಾಮಿಡಿ ಮೂಲಕ ತುಳು ಸಿನಿಪ್ರೇಮಿಗಳನ್ನು ನಗಿಸಿ, ತೆಲಿಕೆದ ಬೊಳ್ಳಿ ಎಂದೇ ಖ್ಯಾತರಾಗಿರುವ ದೇವದಾಸ್ ಮೊದಲ ಬಾರಿಗೆ ನಿರ್ದೇಶಿಸಿರುವ ಕನ್ನಡ ಸಿನಿಮಾವಿದು.

ಈ ಸಿನಿಮಾವು ರಾಷ್ಟ್ರಕೂಟ ಪಿಕ್ಚರ್ ಬ್ಯಾನರ್‌ನಡಿ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಅಜಯ್ ಹಾಗೂ ರಿಷಿಕಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಹೀರೋ ಆಗಿ ತೆರೆಮೇಲೆ ಬರುತ್ತಿರುವ ಅಜಯ್‌ಗೂ ಈ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆಯಿದೆ.

ಇನ್ನು ಈ ಚಿತ್ರದ ಕುರಿತು ನಟ ಅಜಯ್ ಹೀಗೆ ಹೇಳಿದ್ದಾರೆ; “ನಾನು ಈ ಚಿತ್ರದಲ್ಲಿ ಪುರುಷೋತ್ತಮನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ಇದೊಂದು ಪಕ್ಕಾ ಫ್ಯಾಮಿಲಿ ಸ್ಟೋರಿ. ಸಿಂಪಲ್ಲಾಗಿ ಎಲ್ಲರಿಗೂ ಇಷ್ಟವಾಗುವ ಕಥೆ. ಮಕ್ಕಳ ಹಾಗೂ ಪಾಲಕರ ವಿದೇಶ ಮೋಹ ಹಾಗೂ ನಮ್ಮ ದೇಶದ ಹಿರಿಮೆ ಸೇರಿದಂತೆ ಹಲವು ಅಂಶಗಳ ಜೊತೆ ಸಿನಿಮಾ ಸಾಗುತ್ತದೆ. ಚಿತ್ರದಲ್ಲಿ ಕಾಮಿಡಿ ಜೊತೆಗೆ ಯೋಚಿಸುವ ಅಂಶಗಳೂ ಇವೆ. ನನಗೆ ಮೊದಲಿನಿಂದಲೂ ರಂಗಭೂಮಿಯ ನಂಟು. ಟೊರಾಂಟೊ ಯೂನಿವರ್ಸಿಟಿಯಲ್ಲಿ ನಟನೆ ಕುರಿತು ಅಭ್ಯಾಸ ಮಾಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಜನ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೋ ಎಂಬ ಕಾತರವಿದೆ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಈ ಚಿತ್ರ ಮೋಸ ಮಾಡುವುದಿಲ್ಲ’ ಎನ್ನುತ್ತಾರೆ.

- Advertisement -

Latest News

error: Content is protected !!