- Advertisement -
![]()
- Advertisement -
ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಗುರುವಾರದಂದು ಅಂತರ್ ಜಿಲ್ಲಾ ಮೋಟಾರು ಸೈಕಲ್ ಕಳ್ಳರ ಬಂಧನವಾಗಿದೆ.

ಗದಗ ಮೂಲದ ಪ್ರಕ್ಕುದ್ದೀನ್ ( 22 ) ಮತ್ತು ಕಿರಣ ಶರಣಪ್ಪ ಕುಂಬಾರ ( 19 ) ಬಂಧಿತ ಆರೋಪಿಗಳು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳವುಗೈದ ಆರೋಪಿಗಳಿಂದ 2,75,000 ರೂ ಮೌಲ್ಯದ 5 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್ ವಿಷ್ಣುವರ್ಧನರವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ ಉಡುಪಿ ಜಿಲ್ಲೆ ಹಾಗೂ ಶ್ರೀಕಾಂತ ಕೆ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
- Advertisement -


