Sunday, May 19, 2024
Homeಕರಾವಳಿಹೊಸ ಇತಿಹಾಸದತ್ತ ಕಂಬಳ; ಕೋಣಗಳನ್ನು ಓಡಿಸಲಿರುವ ಯುವತಿಯರು!

ಹೊಸ ಇತಿಹಾಸದತ್ತ ಕಂಬಳ; ಕೋಣಗಳನ್ನು ಓಡಿಸಲಿರುವ ಯುವತಿಯರು!

spot_img
- Advertisement -
- Advertisement -

ಮಂಗಳೂರು: ಜಾನಪದ ಕ್ರೀಡೆಯಾದ ಕಂಬಳ ಇದೀಗ ಮತ್ತೊಂದು ಇತಿಹಾಸ ಸೃಷ್ಟಿಸುವತ್ತ ಮುಖ ಮಾಡಿದೆ. ಕಂಬಳದ ಕೋಣಗಳನ್ನು ಹೆಣ್ಣು ಮಕ್ಕಳು ಓಡಿಸುವ ಮೂಲಕ ಇದೆ ಮೊದಲ ಬಾರಿಗೆ ಹೊಸ ಚರಿತ್ರೆಯನ್ನು ಸೃಷ್ಟಿ ಮಾಡುವ ಚಿಂತನೆಯಲ್ಲಿದೆ.

ಹೌದು. ಐದು ಹೆಣ್ಣು ಮಕ್ಕಳು ಕಂಬಳದ ಕೋಣಗಳನ್ನು ಓಡಿಸಲು ಮುಂದೆ ಬಂದಿದ್ದು, ಈ ಬಾರಿಯ ಕಂಬಳ ಋತುವಿನಲ್ಲಿ ಕಂಬಳದ ಕೋಣಗಳನ್ನು ಓಡಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಯಾವ ಕೋಣಗಳನ್ನು ಓಡಿಸಬೇಕು? ಹೇಗೆ ಓಡಿಸಬೇಕೆಂದು ಕಂಬಳ ಅಕಾಡೆಮಿ ನಿರ್ಧಾರ ಮಾಡಲಿದೆ ಎಂದು ಹೇಳಲಾಗಿದೆ.

ಮೂಡಬಿದಿರೆಯ ಕಂಬಳ ಆಕಾಡೆಮಿ ವತಿಯಿಂದ ನಡೆಯುವ ಉಚಿತ ತರಬೇತಿ ಶಿಬಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಂಬಳ ಅಕಾಡಮಿ ಅಧ್ಯಕ್ಷ ಗುಣಪಾಲ ಕಡಂಬ ಈ ಬಗ್ಗೆ ಮಾಹಿತಿ ನೀಡಿದ್ದಾರೆ , ಈ ಬಾರಿ ಹೆಣ್ಣುಮಕ್ಕಳಿಗೂ ಕಂಬಳದಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನ ಮಾಡಲಾಗಿದ್ದು, ಈಗಾಗಲೇ ಐವರು ಕಂಬಳ ಕೋಣದ ಯಜಮಾನ ಕುಟುಂಬದವರು ಮುಂದೆ ಬಂದಿದ್ದಾರೆ. ತಮ್ಮ ಕುಟುಂಬದ ಹೆಣ್ಣುಮಕ್ಕಳನ್ನು ಕೋಣಗಳನ್ನು ಓಡಿಸಲು ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. ಈ ಹೆಣ್ಣು ಮಕ್ಕಳಿಗೆ ಅಕಾಡೆಮಿ ವತಿಯಿಂದ ತರಬೇತಿ ನೀಡಲಾಗುವುದು. ಈ ವರ್ಷದ ಕಂಬಳ ಕೂಟದಲ್ಲೇ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಪುರುಷರು ಕೋಣಗಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೋ ಮಹಿಳೆಯರು ಕೂಡ ಅಷ್ಟೇ ಚೆನ್ನಾಗಿ ಕೋಣಗಳನ್ನು ಸಾಕುತ್ತಾರೆ. ಹೀಗಾಗಿ ಕಂಬಳ ಕೋಣಗಳನ್ನು ಮಹಿಳೆಯರೇ ಗದ್ದೆಗಿಳಿಸಬಹುದು. ಕಂಬಳ ಸಾಂಪ್ರದಾಯಿಕವಾಗಿ ಬಹಳ ಮಹತ್ವ ಹೊಂದಿರುವುದರಿಂದ, ಸಂಪ್ರದಾಯದ ಪ್ರಕಾರವೇ ಮಹಿಳೆಯರಿಗೆ ಅವಕಾಶ ನೀಡುತ್ತೇವೆ ಎಂದು ಗುಣಪಾಲ ಕಡಂಬ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!