- Advertisement -


- Advertisement -
ಬೆಂಗಳೂರು: ದೇಶದ 14 ರಾಜ್ಯಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಉಲ್ಭಣವಾಗುತ್ತಿರುವ ಹಿನ್ನೆಲೆಯಲ್ಲಿ ಕೋಳಿ ಹಾಗೂ ಮೊಟ್ಟೆ ಸೇವನೆಯನ್ನ ನಿಶೇಧಿಸಲಾಗಿದೆ. ಕೆಲವುಕಡೆ ಭೀತಿಯಿಂದ ಜನ ತಾವಾಗಿಯೇ ತಿನ್ನುತ್ತಿಲ್ಲ. ಈ ಮಧ್ಯೆ ಮಾಂಸ ಪ್ರಿಯರಿಗೆ ಮತ್ತೆ ಶಾಕ್ ಎದುರಾಗಿದೆ.ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಫಿಶ್ ಫಾರ್ಮ್ಗಳ ನೀರಿನಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿ ಮಲಿನಕಾರಿ ಅಂಶ ಕಂಡು ಬಂದಿದೆ.ಹಕ್ಕಿ ಜ್ವರದ ಕಾರಣದಿಂದಾಗಿ ಮೀನು ಹಾಗೂ ಕುರಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿತ್ತು.
ಈಗಾಗಲೇ 241 ಫಿಶ್ ಫಾರ್ಮ್ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದರನ್ವಯ 10 ರಾಜ್ಯಗಳ 241 ಫಿಶ್ ಫಾರ್ಮ್ಗಳಲ್ಲಿ ನಡೆಸಲಾದ ಅಧ್ಯಯನದಲ್ಲಿ ಮೀನುಗಳ ದೇಹದಲ್ಲಿ ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬೆಳಕಿಗೆ ಬಂದಿದೆ.ಇವು ಮಾನವನ ದೇಹಕ್ಕೆ ಅತ್ಯಂತ ಭಯಾನಕ ವಾಗಿರುತ್ತವೆ. ಸೀಸ ಹಾಗೂ ಕ್ಯಾಡ್ಮಿಯಂ ಅಂಶ ಬೆಳಕಿಗೆ ಬಂದಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ.
- Advertisement -


