Thursday, June 4, 2026
Homeಕರಾವಳಿಐವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್;ನವೆಂಬರ್ 22 ರಂದು ಪುತ್ತೂರು ಎಸಿ ಮುಂದೆ ಹಾಜರಾಗಲು ಸೂಚನೆ

ಐವರು ಭಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್;ನವೆಂಬರ್ 22 ರಂದು ಪುತ್ತೂರು ಎಸಿ ಮುಂದೆ ಹಾಜರಾಗಲು ಸೂಚನೆ

- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಐವರು ಭಜರಂಗದಳದ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಗಡಿಪಾರು ನೋಟೀಸ್ ನೀಡಿದೆ.

ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ನೋಟೀಸ್ ನೀಡಲಾಗಿದ್ದು, ನವೆಂಬರ್ 22ರಂದು ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ.

ಲತೇಶ್ ಗುಂಡ್ಯ, ದಿನೇಶ್, ಪ್ರಜ್ವಲ್, ನಿಶಾಂತ್ ಮತ್ತು ಪ್ರದೀಪ್ ಎಂಬವರಿಗೆ ನೋಟೀಸ್ ನೀಡಲಾಗಿದ್ದು, ಈ ಪೈಕಿ ದಿನೇಶ್, ಪ್ರಜ್ವಲ್ ಮತ್ತು ಲತೀಶ್ ಭಜರಂಗದಳ ಸಂಘಟನೆಯಲ್ಲಿ ಪುತ್ತೂರು ತಾಲೂಕಿನಲ್ಲಿ ವಿವಿಧ ಜವಾಬ್ದಾರಿ ಹೊಂದಿದ್ದಾರೆ ಎನ್ನಲಾಗಿದೆ.

ನೋಟೀಸ್ ನೀಡಲ್ಪಟ್ಟಿರುವ ಐವರ ಪೈಕಿ ಲತೀಶ್ ಹೊರತುಪಡಿಸಿ ನಾಲ್ವರ ಮೇಲೆ ತಲಾ ಒಂದೊಂದು ಪ್ರಕರಣಗಳಿವೆ ಎಂದು ಹೇಳಲಾಗಿದೆ.

ಪುತ್ತೂರು ನಗರ ಪೊಲೀಸ್ ಠಾಣೆ ಹಾಗೂ ಸುಳ್ಯ ಪೊಲೀಸ್ ಠಾಣೆಯಿಂದ ಗಡಿಪಾರಿಗೆ ಮನವಿ ಸಲ್ಲಿಸಲಾಗಿದ್ದು, ಲತೇಶ್ ಗೆ ಬಳ್ಳಾರಿ ಜಿಲ್ಲೆಗೆ ಹಾಗೂ ಪ್ರಜ್ವಲ್ ಗೆ ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಪೊಲೀಸ್ ಅಧಿನಿಯಮದಡಿ ನೋಟೀಸ್ ನೀಡಲಾಗಿದೆ.

- Advertisement -

Latest News

error: Content is protected !!