Sunday, June 7, 2026
Homeಕರಾವಳಿಮಂಗಳೂರುಸುಳ್ಯದಲ್ಲಿ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಪುತ್ತೂರಿನ ಯುವಕ ನಾಪತ್ತೆ

ಸುಳ್ಯದಲ್ಲಿ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಪುತ್ತೂರಿನ ಯುವಕ ನಾಪತ್ತೆ

- Advertisement -
- Advertisement -

ಸುಳ್ಯದಲ್ಲಿ ಡೆಂಟಲ್‌ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪುತ್ತೂರಿನ ಯುವಕ ನಾಪತ್ತೆಯಾಗಿದ್ದಾನೆ.

 ಸುಳ್ಯದ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಓದುತ್ತಿದ್ದ ಬೆಳಗಾವಿ ಜಿಲ್ಲೆಯ ತೆಲಸಂಗ ಗ್ರಾಮದ ಕೃತಿಕಾ ಸಿದ್ದಣ್ಣ ನಿಡೋಣಿ ಮೊನ್ನೆ ಆತ್ಮಹತ್ಯೆಗೆ ಶರಣಾಗಿದ್ದಳು. ಈ ಬಗ್ಗೆ ಮೃತಳ ತಂದೆ ದೂರು ನೀಡಿದ್ದು, ಅದರಂತೆ ಪುತ್ತೂರಿನ ನವೀನ್‌ ಮತ್ತು ವಸತಿ ಗೃಹದ ಮೇಲ್ವಿಚಾರಕಿ ತಾರ ಕುಮಾರಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪುತ್ತೂರಿನ ನವೀನ್‌ ಎಂಬಾತ ಯುವತಿಗೆ ಪದೇ ಪದೇ ಕರೆ ಮಾಡಿ ತೊಂದರೆ ನೀಡುತ್ತಿದ್ದ, ಫೋಟೋ ವೀಡಿಯೋಗಳನ್ನು ತಂದೆಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಯವತಿ ಮನನೊಂದು ಆತ್ಮಹ್ಯತ್ಯೆ ಗೈದಿರಬಹುದು ಎನ್ನಲಾಗಿದೆ. ವಸತಿ ಗೃಹದ ಮೇಲ್ವಿಚಾರಕಿ ತಾರಾ ಗಮನಿಸದೇ ಪಾಲಕರ ಗಮನಕ್ಕೆ ತರದೇ ಕರ್ತವ್ಯ ಲೋಪವೆಸಗಿದ್ದಾರೆ ಮತ್ತು ಯುವತಿಯ ಆತ್ಮಹತ್ಯೆಗೆ ಕಾರಣವಾದ ನವೀನ್‌ ವಿರುದ್ಧ ದೂರು ನೀಡಲಾಗಿದೆ.ಪುತ್ತೂರಿನ ನವೀನ್‌ ಪರಾರಿಯಾಗಿದ್ದು, ಪೊಲೀಸರು ಹುಡುಕುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!