Monday, June 8, 2026
Homeಕರಾವಳಿಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಪ್ರಾತ್ಯಕ್ಷಿಕೆ; ಸಚಿವ ಎಸ್. ಅಂಗಾರ ಭಾಗಿ!

ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಪ್ರಾತ್ಯಕ್ಷಿಕೆ; ಸಚಿವ ಎಸ್. ಅಂಗಾರ ಭಾಗಿ!

- Advertisement -
- Advertisement -

ಮಂಗಳೂರು:ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಪ್ರಾತ್ಯಕ್ಷಿಕೆಯನ್ನು ಶುಕ್ರವಾರ ಅಳಿವೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.

ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ತಾಂತ್ರಿಕತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು ಕರಾವಳಿಯಲ್ಲಿರುವ ಮೀನುಗಾರರು ಮೀನು ಹಿಡಿಯಲು ಹೋಗುವ ಸಂದರ್ಭದಲ್ಲಿ ಕುಡಿಯಲು ಸಿಹಿ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಇದಕ್ಕಾಗಿ ಸಿಹಿನೀರನ್ನು ಟ್ಯಾಂಕ್ ನಲ್ಲಿ ತುಂಬಿಸಿ ಹೋಗ ಬೇಕಾಗುತ್ತದೆ. ಇದೀಗ ಆಸ್ಟ್ರೇಲಿಯಾ ಹೊಸ ತಂತ್ರಜ್ಞಾನದ ಮೂಲಕ ಮೀನುಗಾರಿಕಾ ಹಡಗಿನಲ್ಲೇ ಈ ಯಂತ್ರಗಳನ್ನು ಅಳವಡಿಸಿ ದೋಣಿಗಳು ಸಾಗುತ್ತಿರುವ ಮಧ್ಯೆ, ಸಮುದ್ರದ ನೀರನ್ನು ಶುದ್ದೀಕರಿಸಿ ಶುದ್ದ ಸಿಹಿ ನೀರನ್ನು ಓದಗಿಸುವ ತಂತ್ರಜ್ಞಾನ ಇದಾಗಿದೆ .ಇದನ್ನ ಮೀನುಗಾರರು ಬಳಸುವಂತಹ ರೀತಿಯಲ್ಲಿ ಸಿದ್ಧತೆಯನ್ನು ಮಾಡಲಾಗುವುದು ಎಂಬುದಾಗಿ ತಿಳಿಸಿದರು.

ಸಚಿವರ ಜೊತೆಗೆ ಮೀನುಗಾರಿಕೆ ಇಲಾಖೆಯ ನಿರ್ದೇಶಕರು, ಅಧಿಕಾರಿಗಳು ಈ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!