Tuesday, July 1, 2025
Homeತಾಜಾ ಸುದ್ದಿದೇಶವಿರೋಧಿ ಚಟುವಟಿಕೆಗಾಗಿ ಪಾಕಿಸ್ತಾನದಿಂದ 5 ಕೋಟಿ ಪಡೆದಿದ್ದಾರಾ ನಟಿ ದೀಪಿಕಾ ಪಡುಕೋಣೆ?

ದೇಶವಿರೋಧಿ ಚಟುವಟಿಕೆಗಾಗಿ ಪಾಕಿಸ್ತಾನದಿಂದ 5 ಕೋಟಿ ಪಡೆದಿದ್ದಾರಾ ನಟಿ ದೀಪಿಕಾ ಪಡುಕೋಣೆ?

spot_img
- Advertisement -
- Advertisement -

ನವದೆಹಲಿ: ದೆಹಲಿಯ ಪ್ರತಿಷ್ಠಿತ ಜೆಎನ್‌ಯು ಕ್ಯಾಂಪಸ್‌ನಲ್ಲಿ ಕೆಲ ತಿಂಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ನಟಿ ದೀಪಿಕಾ ಪಡುಕೋಣೆ ಬರೋಬ್ಬರಿ ಐದು ಕೋಟಿ ಸಂಭಾವನೆ ಪಡೆದಿದ್ದರೆ ಎಂಬ ಆರೋಪ ಎಲ್ಲ ಕಡೆ ಸದ್ದು ಮಾಡುತ್ತಿದೆ.

ಜೆಎನ್‌ಯು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ನಡೆದ ಹಲ್ಲೆ ಖಂಡಿಸಿ ಜನವರಿ 5 ರಂದು ಪ್ರತಿಭಟನೆಗಳು ನಡೆದಿತ್ತು. ಈ ವಿಚಾರ ಭಾರೀ ಗಂಭೀರ ಸ್ವರಪ ಪಡೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯ ರಸ್ತೆಗಿಳಿದು ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.

ಈ ಸಮಯದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಆವರಣಕ್ಕೆ ತಲುಪಿದ್ದರು. ಸುಮಾರು ಹತ್ತು ನಿಮಿಷ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಆರೋಪ ಕೇಳಿ ಬಂದಿದ್ದು, ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ದೀಪಿಕಾ ಬರೋಬ್ಬರಿ ಐದು ಕೋಟಿ ಪಡೆದಿದ್ದರೆಂದು ಕೇಳಿ ಬಂದಿದೆ.

ಈ ಕುರಿತು ಮಾಜಿ ರೀಸರ್ಚ್‌ ಆಯಂಡ್‌ ಎನಾಲಿಸಿಸ್‌ ವಿಂಗ್‌ನ (ರಾ) ಅಧಿಕಾರಿ ಎನ್.ಕೆ.ಸೂದ್ ಅವರು ಮಾಹಿತಿ ನೀಡಿದ್ದು, ಪಾಕಿಸ್ತಾನ ಸಂಬಂಧ ಹೊಂದಿರುವ ವ್ಯಕ್ತಿಯಿಂದ ದೀಪಿಕಾಗೆ ಐದು ಕೋಟಿ ರೂಪಾಯಿ ಹಣ ಬಂದಿರುವುದಾಗಿ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆಂದು ಹೇಳಲಾಗುವ ಪ್ರಮುಖ ಉದ್ಯಮಿ ಅನೀಲ್ ಮುಸರತ್ ಅವರಿಂದ 5 ಕೋಟಿ ರೂಪಾಯಿ ಪಡೆದಿರುವ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

- Advertisement -
spot_img

Latest News

error: Content is protected !!