- Advertisement -


- Advertisement -
ಬೆಳ್ತಂಗಡಿ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಪದ್ಮುಂಜ ಗ್ರಾಮದ ಪೊಯ್ಯ ಎಂಬಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮೃತರಾದವರನ್ನು ಕೂಲಿ ಕಾರ್ಮಿಕ ನಾಣ್ಯಪ್ಪ ಪೂಜಾರಿ (55.ವ) ಎಂದು ಗುರುತಿಸಲಾಗಿದ್ದು, ಇವರು ಬೆಳಗ್ಗೆ 6.30 ಕ್ಕೆ ಉಪ್ಪಿನಂಗಡಿ ಕೋಳಿ ಅಂಗಡಿಗೆ ಕೂಲಿ ಕೆಲಸಕ್ಕೆಂದು ಹೋಗುವ ಸಂದರ್ಭದಲ್ಲಿ ದಾರಿ ಮಧ್ಯೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.


ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದ್ದರಿಂದ ತಂತಿ ಕಾಲಿಗೆ ತಗುಲಿ ಈ ಘಟನೆ ನಡೆದಿದೆ.ದಾರಿ ಹೋಕರು ಇದನ್ನು ಗಮನಿಸಿ ಮನೆಯವರಿಗೆ ವಿಷಯ ತಿಳಿಸಿದ್ದಾರೆನ್ನಲಾಗಿದೆ.
ಮೃತರು ಪತ್ನಿ ಕೇಶವತಿ, ಪುತ್ರಿ ದೀಕ್ಷಿತಾ, ಪುತ್ರರಾದ ದೀಕ್ಷಿತ್, ರಕ್ಷಿತ್ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ
- Advertisement -


