Thursday, June 4, 2026
Homeಕರಾವಳಿಸುಬ್ರಮಣ್ಯ: ನದಿಯಲ್ಲಿ ಕಡವೆಯ ಮೃತದೇಹ ಪತ್ತೆ

ಸುಬ್ರಮಣ್ಯ: ನದಿಯಲ್ಲಿ ಕಡವೆಯ ಮೃತದೇಹ ಪತ್ತೆ

- Advertisement -
- Advertisement -

ಸುಬ್ರಮಣ್ಯ: ನದಿಯಲ್ಲಿ ಕಡವೆಯ ಮೃತದೇಹ ಪತ್ತೆಯಾದ ಸುಬ್ರಮಣ್ಯದಲ್ಲಿ ನಡೆದಿದೆ. ಇಲ್ಲಿನ ಕನ್ನಡಿ ಹೊಳೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಎರಡು ಮೂರು ದಿನಗಳ ಹಿಂದೆ ಕಡವೆ ಸತ್ತಿರುವುದಾಗಿ ಅಂದಾಜಿಸಲಾಗಿದ್ದು ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಗೋಚರಿಸಿದೆ.

ಸ್ಥಳೀಯರು ನೋಡಿ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸಾಮಾಜಿಕ ಕಾರ್ಯಕರ್ತ ರವಿ ಕಕ್ಕೆಪದವು ಅವರ ನೇತೃತ್ವದಲ್ಲಿ ಕಡವೆ ದೇಹವನ್ನು ಮೇಲಕೆತ್ತಲಾಗಿದೆ.  ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದವರು ಜೆಸಿಬಿಯನ್ನು ಉಚಿತವಾಗಿ ನೀಡಿ ಸಹಕರಿಸಿದರು.

ಸುಬ್ರಹ್ಮಣ್ಯ ಗ್ರಾ .ಪಂ. ಕಸ ವಿಲೇವಾರಿ ವಾಹನದ ಸಹಾಯದಿಂದ ಕಳೆಬರವನ್ನು ಕಾಡಿಗೆ ಕೊಂಡೊಯ್ದು  ಅಲ್ಲಿ ಹೂತು ಹಾಕಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!