Sunday, May 19, 2024
Homeತಾಜಾ ಸುದ್ದಿನಂದಿನಿ ಉತ್ಪನ್ನಗಳ ಬೆಲೆ ಮತ್ತೊಮ್ಮೆ ಮರು ಪರಿಷ್ಕರಿಸಿದ ಕೆಎಂಎಫ್

ನಂದಿನಿ ಉತ್ಪನ್ನಗಳ ಬೆಲೆ ಮತ್ತೊಮ್ಮೆ ಮರು ಪರಿಷ್ಕರಿಸಿದ ಕೆಎಂಎಫ್

spot_img
- Advertisement -
- Advertisement -

ಬೆಂಗಳೂರು: ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯನ್ನು ಕೆಎಂಎಫ್ ಮತ್ತೊಮ್ಮೆ ಪರಿಷ್ಕರಿಸಿದೆ.

ಇಂದಿನಿಂದ 5% ಜಿಎಸ್ ಟಿ ಒಳಗೊಂಡಂತೆ ಮರು ಪರಿಷ್ಕರಿಸಿದ ದರಗಳಲ್ಲಿ ನಂದಿನಿ ಉತ್ಪನ್ನಗಳಾದ ಮೊಸರು, ಮಜ್ಜಿಗೆಯನ್ನು ಮತ್ತು ಲಸ್ಸಿ ಪೊಟ್ಟಣಗಳು ಮಾರಾಟವಾಗಲಿವೆ.

ಕೇಂದ್ರ ಸರ್ಕಾರ ಮೊಸರು, ಮಜ್ಜಿಗೆ ಮತ್ತು ಸಿಹಿ ಲಸ್ಸಿ ಉತ್ಪನ್ನಗಳ ಮೇಲೆ ಜಿಎಸ್ ಟಿ ‌ವಿಧಿಸಿರುವ ಹಿನ್ನೆಲೆಯಲ್ಲಿ ಕೆಎಂಎಫ್ ನಿನ್ನೆಯಿಂದ ಜಾರಿಗೆ ಬರುವಂತೆ ದರ ಪರಿಷ್ಕರಣೆ ಮಾಡಿತ್ತು. ಆದರೆ ಸಿಎಂ ಸೂಚನೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರಿಷ್ಕರಣೆ ಮಾಡಿದೆ.

ಮೊಸರು 200 ಗ್ರಾಮ್ ಸ್ಯಾಚೆ 50 ಪೈಸೆ, 500 ಗ್ರಾಂ ಸ್ಯಾಚೆ ಬೆಲೆ 1 ರೂಪಾಯಿ ಮತ್ತು 1000 ಗ್ರಾಂ ಸ್ಯಾಚೆ ಬೆಲೆ 2 ರೂಪಾಯಿ ಏರಿಕೆಯಾಗಲಿದೆ.

ಮಜ್ಜಿಗೆ 200 ಮಿ.ಲೀ ಸ್ಯಾಚೆ, 200 ಮಿ.ಲೀ ಟೆಟ್ರಾ ಪ್ಯಾಕ್ ಮತ್ತು ಪೆಟ್ ಬಾಟಲ್ ಬೆಲೆ ತಲಾ 50 ಪೈಸೆ ಹೆಚ್ಚಳವಾಗಲಿದೆ.

ಲಸ್ಸಿ 200 ಮಿ.ಲೀ. ಸ್ಯಾಚೆ 50 ಪೈಸೆ, ಟೆಟ್ರಾ ಪ್ಯಾಕ್ ಸಾದ 1 ರೂಪಾಯಿ, ಪೆಟ್ ಬಾಟಲ್ ಸಾದ ಮತ್ತು ಪೆಟ್ ಬಾಟಲ್ ಮ್ಯಾಂಗೋ ಬೆಲೆ ತಲಾ 1 ರೂಪಾಯಿ ಏರಿಕೆಯಾಗಿದೆ. ಟೆಟ್ರಾ ಪ್ಯಾಕ್ ಮ್ಯಾಂಗೋ ಬೆಲೆ 1.50 ರೂಪಾಯಿ ಹೆಚ್ಚಳಗೊಳ್ಳಲಿದೆ.

- Advertisement -
spot_img

Latest News

error: Content is protected !!