- Advertisement -
- Advertisement -
ಬೆಂಗಳೂರು : 5 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಆರೋಪಿ ಚೆನ್ನನ ನಾಯಕನನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದ್ದಾರೆ.ಬೆಂಗಳೂರಿನ ಯಶವಂತಪುರ ಬಳಿ ಸಿಸಿಬಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ಚೆನ್ನಾ ನಾಯಕ್ ನಟಿಸಿದ್ದ ಎನ್ನಲಾಗಿದೆ.
ಅಲ್ಲದೆ ವಿಕ್ಟೋರಿಯಾ ಆಸ್ಪತ್ರೆಗೆ A1 ಆರೋಪಿಯಾಗಿರುವ ಚೈತ್ರಾ ಕುಂದಾಪುರಳನ್ನು ವೈದ್ಯಕೀಯ ತಪಾಸನೆಗೆ ಒಳಪಡಿಸಲಾಗಿದೆ. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಚೈತ್ರಾ ಸ್ವಾಮೀಜಿ ಸಿಕ್ಕಾಕಿಕೊಳ್ಳಲಿ ಎಲ್ಲವೂ ಗೊತ್ತಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ ಪೆಂಡಿಂಗ್ ಉಳಿಸಿಕೊಂಡಿದ್ದಕ್ಕೆ ಷಡ್ಯಂತ್ರ ನಡೆಸಲಾಗಿದೆ. ಎಲ್ಲಾ ದೊಡ್ಡ ದೊಡ್ಡ ಹೆಸರು ಹೊರಗಡೆ ಬರುತ್ತೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾಳೆ.
- Advertisement -