Sunday, June 7, 2026
Homeಕರಾವಳಿಕುಮಾರಧಾರ ನದಿಯಲ್ಲಿ ದನದ ಮೃತದೇಹ ಪತ್ತೆ

ಕುಮಾರಧಾರ ನದಿಯಲ್ಲಿ ದನದ ಮೃತದೇಹ ಪತ್ತೆ

- Advertisement -
- Advertisement -

ಸುಬ್ರಹ್ಮಣ್ಯ: ಕುಮಾರಧಾರ ನದಿಯಲ್ಲಿ ದನದ ಮೃತದೇಹ ಪತ್ತೆಯಾಗಿದ್ದು, ದನವು ಮೊಸಳೆ ಬಾಯಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮೂರು ದಿನಗಳಿಂದ ಸುಬ್ರಹ್ಮಣ್ಯದ ಕುಮಾರಧಾರ ಸ್ಥಾನಘಟ್ಟದ ಬಳಿ ದನದ ಮೃತದೇಹ ತೇಲುತ್ತಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಸ್ಥಳಿಯಾಡಳಿತ ಗಮನಕ್ಕೆ ತಂದಿದ್ದರು ಎಂದು ತಿಳಿದು ಬಂದಿದೆ. ವಿಚಾರ ಗೊತ್ತಿದ್ದರೂ ಸ್ಥಳಿಯಾಡಳಿತ ಮೃತದೇಹವನ್ನು ನದಿಯಿಂದ ತೆರವುಗೊಳಿಸಿರಲಿಲ್ಲ.

ಆದರೆ ರವಿ ಕಕ್ಕೆ ಪದವು ಸಮಾಜ ಸೇವಾ ತಂಡದವರು ಮೃತದೇಹವನ್ನು ನದಿಯಿಂದ ಹೊರ ತೆಗೆದು ದಫನ ಮಾಡಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Latest News

error: Content is protected !!