Thursday, June 4, 2026
Homeಕರಾವಳಿಉಡುಪಿಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಬಳಿ ಯುವಕನ ಮೃತದೇಹ ಪತ್ತೆ: ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ...

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಬಳಿ ಯುವಕನ ಮೃತದೇಹ ಪತ್ತೆ: ರೈಲು ಡಿಕ್ಕಿ ಹೊಡೆದು ಮೃತಪಟ್ಟಿರುವ ಶಂಕೆ

- Advertisement -
- Advertisement -

ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಬಳಿ ಯುವಕನೋರ್ವನ ಮೃತದೇಹ ಗುರುವಾರ ಪತ್ತೆಯಾಗಿದೆ. ಮೃತರನ್ನು ಕುಂಜಿಬೆಟ್ಟುವಿನ ನಿವಾಸಿ ಭೀಮಪ್ಪ (31) ಎಂದು ಗುರುತಿಸಲಾಗಿದೆ. ಇವರು ಕಾಂಕ್ರೀಟ್ ಫ್ಲ್ಯಾಬ್ ಹಾಕುವ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಬೆಳಗ್ಗೆ 7 ಗಂಟೆಗೆ ಮನೆಯಿಂದ ಕೆಲಸಕ್ಕೆಂದು ಉಡುಪಿಗೆ ಹೋಗಿದ್ದರು.

ಮಧ್ಯಾಹ್ನದ ವೇಳೆಗೆ ನೆರೆಮನೆಯವರು ತಿಳಿಸಿದಂತೆ ಇಂದ್ರಾಳಿ ಬ್ರಿಡ್ಜ್ ಕೆಳ ಭಾಗದಲ್ಲಿ ಭೀಮಪ್ಪರವರ ತಲೆ ಮತ್ತು ಮುಖದಲ್ಲಿ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆ್ಯಂಬುಲೆನ್‌ಸ್‌ನಲ್ಲಿ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಮೃತಪಟ್ಟಿರುವ ವಿಚಾರ ತಿಳಿದುಬಂದಿದೆ. ಭೀಮಪ್ಪ ಮನೆಗೆ ಬರಲು ಹತ್ತಿರವಾಗುತ್ತದೆ ಎಂಬ ಉದ್ದೇಶದಿಂದ ಯಾವಾಗಲು ರೈಲ್ವೆ ಬ್ರಿಡ್ಜ್‌ನ ದಾರಿಯ ರೈಲ್ವೇ ಹಳಿಯ ಬಳಿ ನಡೆದುಕೊಂಡು ಬರುತ್ತಿದ್ದರು. ಜು.20ರಂದು ಕೂಡ ಕೆಲಸಕ್ಕೆ ಹೋದವರು ಕೆಲಸ ಸಿಗದೇ ವಾಪಾಸು ಮನೆಗೆ ರೈಲ್ವೇ ಹಳಿಯ ಬಳಿ ನಡೆದುಕೊಂಡು ಬರುವಾಗ ಬಾರ್ಕೂರು – ಉಡುಪಿ ಮಧ್ಯೆ ಸಂಚರಿಸುವ ಯಾವುದೋ ರೈಲು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎನ್ನಲಾಗಿದೆ

- Advertisement -

Latest News

error: Content is protected !!