Friday, June 5, 2026
Homeಕರಾವಳಿಕಡಬದಲ್ಲಿ ಮತ್ತೆ ಜೆರಾಕ್ಸ್ ನೋಟುಗಳ ಹಾವಳಿ ಬಾಡಿಗೆಗೆ ತೆರಳಿದ ಆಟೋ ಚಾಲಕನಿಗೆ ಸಿಕ್ತು 50 ರೂ....

ಕಡಬದಲ್ಲಿ ಮತ್ತೆ ಜೆರಾಕ್ಸ್ ನೋಟುಗಳ ಹಾವಳಿ ಬಾಡಿಗೆಗೆ ತೆರಳಿದ ಆಟೋ ಚಾಲಕನಿಗೆ ಸಿಕ್ತು 50 ರೂ. ಮುಖ ಬೆಲೆಯ ನಕಲಿ ನೋಟು

- Advertisement -
- Advertisement -

ಕಡಬ: ಕಡಬದಲ್ಲಿ ಮತ್ತೆ ಜೆರಾಕ್ಸ್ ನೋಟುಗಳ ಹಾವಳಿ ಶುರುವಾಗಿದೆ. ಕೆಲ ತಿಂಗಳ ಹಿಂದೆ ಕಡಬ ಸಮೀಪದ ಕೋಡಿಂಬಾಳದಲ್ಲಿ ಚಿಕನ್ ಸೆಂಟರ್ ನಲ್ಲಿ 100 ರೂ ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ನಿನ್ನೆ  ಮರ್ದಾಳದ ಹಿಂದೂಸ್ಥಾನ್ ಹೆಸರಿನ ಆಟೋ ಚಾಲಕ ಹೈದರ್ ಎಂಬವರಿಗೆ ಈ ಜೆರಾಕ್ಸ್ ನೋಟು ಸಿಕ್ಕಿದೆ.

ಆಟೋ ಚಾಲಕ ಹೈದರ್ ನಿನ್ನೆ  ಕಡಬ , ಮರ್ದಾಳ ಪರಿಸರದಲ್ಲಿ ಹೆಚ್ಚು ಬಾಡಿಗೆಗೆ ಹೋಗಿದ್ದರು. ಜುಲೈ 21 ರಂದು ಮುಂಜಾನೆ ನೆಟ್ಟಣ ರೈಲು ನಿಲ್ದಾಣಕ್ಕೆ ಬಾಡಿಗೆ ಇತ್ತು. ಹೀಗಾಗಿ ಅಲ್ಲಿ ಪ್ರಯಾಣಿಕನಿಗೆ ಚಿಲ್ಲರೆ ಕೊಡುವ ವೇಳೆ 50 ರೂ ನೋಟು  ಬಣ್ಣ ಕಳೆದು ಕೊಂಡ ರೀತಿಯಲ್ಲಿ ಕಾಣಿಸಿದೆ.  ನಂತರ ಈ ನೋಟನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಜೆರಾಕ್ಸ್ ನೋಟು ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿರುವ ಹೈದರ್ ಅವರು ಜೆರಾಕ್ಸ್ ನೋಟು ನೀಡಿ ಯಾರೋ ನನಗೆ ಮೋಸ ಮಾಡಿದ್ದು  ಎಲ್ಲಾ ಚಾಲಕರು,ಅಂಗಡಿಯವರು ನೋಟು ಸ್ವೀಕರಿಸುವ  ಎಚ್ಚರವಹಿಸುವಂತೆ ಮನವಿ ನೀಡಿದ್ದಾರೆ.

- Advertisement -

Latest News

error: Content is protected !!