Thursday, June 4, 2026
Homeಕರಾವಳಿಉಡುಪಿಕುಂದಾಪುರ:  ಕೆರೆಯಲ್ಲಿ ಬಿದ್ದ ವ್ಯಕ್ತಿಯ ಮೃತದೇಹ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

ಕುಂದಾಪುರ:  ಕೆರೆಯಲ್ಲಿ ಬಿದ್ದ ವ್ಯಕ್ತಿಯ ಮೃತದೇಹ ಮೇಲಕ್ಕೆತ್ತಿದ ಈಶ್ವರ್ ಮಲ್ಪೆ

- Advertisement -
- Advertisement -

ಕುಂದಾಪುರ: ಇಲ್ಲಿನ ಹಾಲಾಡಿಯಲ್ಲಿ ಯುವಕನೊಬ್ಬ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ನಂತರ ಯುವಕನ ಮೃತದೇಹವನ್ನು ಆಪದ್ಬಾಂಧವ ಈಶ್ವರ್‌ ಮಲ್ಪೆ ಮೇಲಕ್ಕೆತ್ತಿದ್ದಾರೆ. 40 ಅಡಿ ಅಳದ ಕೆರೆಗೆ ಬಿದ್ದು ಯುವಕ ಮೃತಪಟ್ಟಿದ್ದ. ಹಾಗಾಗಿ ಮೃತದೇಹ ಮೇಲೆತ್ತುವುದು ಕಷ್ಟಕರವಾಗಿತ್ತು, ನಂತರ ಈಶ್ವರ್‌ ಮಲ್ಪೆವಹಗ್ಗದ ಸಹಾಯದಿಂದ ಕೆರೆಗೆ ಇಳಿದು ಮೃತದೇಹ ಮೇಲಕ್ಕೆತ್ತಿದ್ದಾರೆ.

ಉಮೇಶ್ ಎಂಬುವವರೇ ಮೃತಪಟ್ಟವರು. ಇವರು  ಹಾಲಾಡಿಯ ಅಡಿಕೆ ತೋಟದಲ್ಲಿ ನಡೆದುಕೊಂಡು ಹೋಗುತ್ತಿದಾಗ, ತೋಟದ ಮಧ್ಯೆ ಇರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. 40 ಅಡಿ ಆಳವಿದ್ದ ಕೆರೆಯಾದ ಕಾರಣ ಮೃತದೇಹವನ್ನು ಮೇಲಕ್ಕೆತ್ತುವುದು ಕಷ್ಟವಾಗಿತ್ತು. ಹೀಗಾಗಿ ಮಲ್ಪೆಯ ಆಪದ್ಭಾಂಧವ ಈಶ್ವರ್ ಮಲ್ಪೆ ಅವರಿಗೆ ವಿಷಯ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಈಶ್ವರ್ ಮಲ್ಪೆ, ಹಗ್ಗದ ಸಹಾಯದಿಂದ ಕೆರೆಗೆ ಇಳಿದು, ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!