Wednesday, June 3, 2026
Homeಕರಾವಳಿಉಳ್ಳಾಲ ಸಮುದ್ರ ತೀರದಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

ಉಳ್ಳಾಲ ಸಮುದ್ರ ತೀರದಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

- Advertisement -
- Advertisement -

ಮಂಗಳೂರು : ಉಳ್ಳಾಲದ ಕೋಟೆಪುರ ಸಮುದ್ರತೀರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.


ಮೃತರನ್ನು ಉಳ್ಳಾಲದ ಕೋಟೆಪುರದ ಮೀನುಗಾರಿಕಾ ಬೋಟನ್ನು ತಯಾರಿಸುವ ವೃತ್ತಿ ನಡೆಸುತ್ತಿದ್ದ ಕಿನ್ಯಾ ನಿವಾಸಿ ನಿತ್ಯಾನಂದ ಭಂಡಾರಿ (40) ಎಂದು ಗುರುತಿಸಲಾಗಿದೆ. ಕೋಟೆಪುರ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದ್ದು, ಪೊಲೀಸರ ಪರಿಶೀಲನೆಯ ವೇಳೆ ಮೃತದೇಹದ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದು, ಇದೊಂದು ಸಂಶಯಾಸ್ಪದ ಸಾವಾಗಿದೆ ಎಂದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!