Wednesday, June 24, 2026
Homeಕರಾವಳಿಬೆಳ್ತಂಗಡಿ; ಮೂರು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯ ಅಸ್ಥಿಪಂಜರ ಕಾಡಿನಲ್ಲಿ ಪತ್ತೆ

ಬೆಳ್ತಂಗಡಿ; ಮೂರು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯ ಅಸ್ಥಿಪಂಜರ ಕಾಡಿನಲ್ಲಿ ಪತ್ತೆ

- Advertisement -
- Advertisement -

ಬೆಳ್ತಂಗಡಿ; ಮೂರು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯ ಅಸ್ಥಿಪಂಜರ ಕಾಡಿನಲ್ಲಿ ಪತ್ತೆಯಾಗಿರುವ ಘಟನೆ ಪುದುವೆಟ್ಟು ಗ್ರಾಮದ ಪದವಿನ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಳಂಜ ಗ್ರಾಮ ಬೆಳ್ತಂಗಡಿ ನಿವಾಸಿ ಟೋನಿ ಎಂಬವರ ತಂದೆ ಜೊಸೇಫ್ ರವರು ಮದ್ಯ ವ್ಯಸನಿಯಾಗಿದ್ದು, ಮನೆಗೆ ಬಾರದೆ ದೂರದ ಊರಿಗೆ ಹೋಗಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡು, ಬಸ್ಸು ನಿಲ್ದಾಣದ ಬಳಿ ಮಲಗುತ್ತಿದ್ದವರು. ಮೂರು ವರ್ಷದ ಹಿಂದೆ ಮನೆಗೆ ಬಂದು ಹೋದವರು ವಾಪಾಸು ಮನೆಗೆ ಬಂದಿರಲಿಲ್ಲ. ಹುಡುಕಾಡಿದ್ರೂ ಸುಳಿವು ಸಿಕ್ಕಿರಲಿಲ್ಲ. ದಿನಾಂಕ: 20-03-2024 ರಂದು ಸಂಜೆ, ಟೋನಿ ಅವರಿಗೆ ಅವರ ತಂದೆ ರಾಜು ಜೊಸೇಫ್ ರವರ ಕಳೆಬರ ದೊರೆತಿದ್ದು,  ಅಲ್ಲೆ ಇದ್ದ ಬ್ಯಾಗ್ ವೊಂದರಲ್ಲಿ ಆಧಾರ್ ಕಾರ್ಡ್ ಕೂಡಾ ದೊರೆತಿರುವುದಾಗಿ ಮಾಹಿತಿ ಬಂದಿದೆ.

 ಟೋನಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ, ತನ್ನ ತಂದೆಯ ಕಳೆಬರವೆಂದು ಗುರುತಿಸಿದ್ದಾರೆ. ರಾಜು ಅವರು ಅರಣ್ಯದಲ್ಲಿ ಪ್ರದೇಶದಲ್ಲಿ ಮದ್ಯಪಾನ ಮಾಡಿ ಮಲಗಿದ್ದವರು ಯಾವುದೋ ಅನಾರೋಗ್ಯದಿಂದ ಮೃತಪಟ್ಟಿರುವಂತೆ ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ  ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್‌ ಕ್ರಮಾಂಕ:25/2024  ಕಲಂ: 174 ಸಿ ಆರ್‌ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!