Wednesday, June 24, 2026
Homeಕರಾವಳಿಮಂಗಳೂರುಮಂಗಳೂರು ಬೆಂಗಳೂರು ಮಧ್ಯೆ ಮತ್ತೆ ಹಗಲು ರೈಲು ಸಂಚಾರ ಆರಂಭ

ಮಂಗಳೂರು ಬೆಂಗಳೂರು ಮಧ್ಯೆ ಮತ್ತೆ ಹಗಲು ರೈಲು ಸಂಚಾರ ಆರಂಭ

- Advertisement -
- Advertisement -

ಮಂಗಳೂರು ಬೆಂಗಳೂರು ಮಧ್ಯೆ ಕಳೆದ ಆರು ತಿಂಗಳಿಂದ ಸ್ಥಗಿತವಾಗಿದ್ದ ಬೆಂಗಳೂರು-ಮಂಗಳೂರು-ಕಾರವಾರ ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲು ಹಗಲು ಸಂಚಾರ ಮತ್ತೆ ಪ್ರಾರಂಭವಾಗುತ್ತಿದೆ.

. ಕಳೆದ ಆರು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಬೆಂಗಳೂರು-ಮಂಗಳೂರು-ಕಾರವಾರ ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ (16575/16576) ರೈಲು ಸೇವೆ ಪುನರಾರಂಭಗೊಳ್ಳಲು ಸಿದ್ಧವಾಗಿದೆ. ವಿದ್ಯುದೀಕರಣ ಕಾಮಗಾರಿಗಳಿಂದಾಗಿ ರದ್ದುಗೊಂಡಿದ್ದ ಈ ರೈಲು, ಇನ್ನು ಮುಂದೆ ಯಶವಂತಪುರ ನಿಲ್ದಾಣದಿಂದ ತನ್ನ ನಿಯಮಿತ ಸಂಚಾರವನ್ನು ಮುಂದುವರಿಸಲಿದೆ ಎಂದು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಪುನರಾರಂಭದ ಜೊತೆಗೆ, ರೈಲ್ವೆ ಇಲಾಖೆಯು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ಗೆ ಮಹತ್ವದ ಸುಧಾರಣೆಗಳನ್ನು ತಂದಿದೆ. ಬೆಳಗಿನ ಸಮಯದಲ್ಲಿ ಸಂಚರಿಸುವ ಈ ರೈಲಿನಲ್ಲಿ ಪ್ರಯಾಣಿಕರು ಪಶ್ಚಿಮ ಘಟ್ಟಗಳ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನೆರವಾಗುವ ‘ವಿಸ್ಟಾಡೋಮ್ ಕೋಚ್’ ಗಳನ್ನು ಅಳವಡಿಸಲಾಗಿದೆ. ಇದು ಯಶವಂತಪುರದಿಂದ ಹೊರಟು ಚಿಕ್ಕಬಾಣಾವರ, ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಮತ್ತು ಬಂಟ್ವಾಳ ಮೂಲಕ ಮಂಗಳೂರು ತಲುಪಲಿದೆ. ಪ್ರಯಾಣಿಕರು ಈ ರೈಲು ಸೇವೆಯನ್ನು ಬಳಸಿಕೊಂಡು ಕರಾವಳಿ ತೀರದ ಪ್ರವಾಸವನ್ನು ಆನಂದಿಸಲು ನೈಋತ್ಯ ರೈಲ್ವೆ ಮನವಿ ಮಾಡಿದೆ.

- Advertisement -

Latest News

error: Content is protected !!