Sunday, May 12, 2024
Homeಕರಾವಳಿಪುತ್ತೂರಿನ ಮಾಡಾವಿನಲ್ಲೊಬ್ಬಳು ಗಟ್ಟಿಗಿತ್ತಿ ಯುವತಿ; ಹಾವು ಕಚ್ಚಿದ ಅಮ್ಮನ ಜೀವವನ್ನು ತನ್ನ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ...

ಪುತ್ತೂರಿನ ಮಾಡಾವಿನಲ್ಲೊಬ್ಬಳು ಗಟ್ಟಿಗಿತ್ತಿ ಯುವತಿ; ಹಾವು ಕಚ್ಚಿದ ಅಮ್ಮನ ಜೀವವನ್ನು ತನ್ನ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಮಗಳು

spot_img
- Advertisement -
- Advertisement -

ಪುತ್ತೂರು : ಇಲ್ಲಿನ ಮಾಡಾವಿನಲ್ಲೊಬ್ಬು ಗಟ್ಟಿಗಿತ್ತಿ ಯುವತಿ ತನ್ನ ಪ್ರಾಣವನ್ನು ಪಣಗಿಟ್ಟು ಅಮ್ಮನ ಜೀವ ಉಳಿಸಿದ್ದಾಳೆ. ಪುತ್ತೂರು ತಾಲೂಕಿನ ಮಾಡಾವಿನಲ್ಲಿ ಕೆಯ್ಯೂರು ಗ್ರಾಮ ಪಂಚಾಯತ್‌ ಸದಸ್ಯೆಯಾಗಿರುವ ಮಮತಾ ರೈ ಎಂಬವರಿಗೆ ತಮ್ಮ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದಾಗ ಆಕಸ್ಮಿಕವಾಗಿ ನಾಗರ ಹಾವೊಂದು ಕಚ್ಚಿದೆ. ಅಮ್ಮನ ಅಳುತ್ತಿದ್ದ ಶಬ್ಧ ಕೇಳಿ ಓಡಿ ಬಂದ ಅವರ ಮಗಳು ಶ್ರಮ್ಯ ಅಮ್ಮನಿಗೆ ಧೈರ್ಯ ಹೇಳಿ ಕೊಂಚವೂ ಭಯಪಡದೆ ಹಾವು ಕಚ್ಚಿದ ಭಾಗವನ್ನು ಬಾಯಿಯಿಂದ ಕಚ್ಚಿ ವಿಷವನ್ನು ತೆಗೆದು ಪ್ರಥಮ ಚಿಕಿತ್ಸೆ ನೀಡಿ ತಾಯಿಯ ಪ್ರಾಣ ಉಳಿಸಿದ್ದಾಳೆ.

ಬಳಿಕ ಕೂಡಲೇ ಅಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ್ದಾರೆ. ಇದೀಗ  ಮಮತಾ ರೈ ಕೊಂಚ ಚೇತರಿಸಿಕೊಂಡಿದ್ದಾರೆ. ಶ್ರಮ್ಯ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ರೋವರ್ಸ್‌ ಆಂಡ್‌ ರೇಂಜರ್ ವಿದ್ಯಾರ್ಥಿನಿಯೂ ಆಗಿದ್ದರು ಅಲ್ಲಿ ಕಲಿತ ಪ್ರಥಮ ಚಿಕಿತ್ಸಾ ವಿಧಾನವನ್ನು ಬಳಸಿಕೊಂಡು ತಾಯಿಯ ಪ್ರಾಣವನ್ನು ರಕ್ಷಿಸಿದ್ದಾರೆ.

ಶ್ರಮ್ಯಳ  ಧೈರ್ಯಕ್ಕೆ ಸ್ಥಳೀಯರು ಸೇರಿದಂತೆ ಶಾಸಕ ಸಂಜೀವ ಮಠಂದೂರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರಮ್ಯ ರೈಗೆ  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆಯ

- Advertisement -
spot_img

Latest News

error: Content is protected !!