Wednesday, June 3, 2026
Homeತಾಜಾ ಸುದ್ದಿದರ್ಶನ್ ನಲ್ಲಿ ಬಿಂದಾಸ್ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ವೀಡಿಯೋ ಕೂಡ ವೈರಲ್

ದರ್ಶನ್ ನಲ್ಲಿ ಬಿಂದಾಸ್ ಆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ವೀಡಿಯೋ ಕೂಡ ವೈರಲ್

- Advertisement -
- Advertisement -

ಬೆಂಗಳೂರು; ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಷ್ಟೊಂದು ಬಿಂದಾಸ್ ಆಗಿದ್ದಾರೆ ಅನ್ನುವ ಫೋಟೋ ಒಂದು ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಒಂದು ಕೈಯಲ್ಲಿ ಕಾಫಿ ಕಪ್ , ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡ್ಕೊಂಡು ರೌಡಿಗಳಾಗ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಹಾಗೂ ತಮ್ಮ ಮ್ಯಾನೇಜರ್ ನಾಗರಾಜ್ ಜೊತೆ ಮಾತನಾಡುತ್ತಿರುವ ಫೋಟೋ ವೈರಲ್ ಆಗಿದೆ.

ಇದರ ಬೆನ್ನಲ್ಲೇ ಇದೀಗ ವೀಡಿಯೋ ಕೂಡ ವೈರಲ್ ಆಗಿದೆ. ದರ್ಶನ್ ಜೈಲಿನಿಂದಲೇ ವಿಡಿಯೋ ಕಾಲ್ ಮಾಡಿ ಮಾತನಾಡಿರುವ ವೀಡಿಯೋ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಜೈಲಿನಲ್ಲಿರೋ ಸಹ ಕೈದಿ ಮೊಬೈಲ್‌ನಿಂದ ವೀಡಿಯೋ ಕಾಲ್ ಮೂಲಕ ದರ್ಶನ್ ತನ್ನ ಅಭಿಮಾನಿಯ ಜೊತೆ ಮಾತನಾಡಿರೋ ಸಾಧ್ಯತೆ ಇದೆ ಎನ್ನಲಾಗಿದೆ.ಸದ್ಯ ವಿಡಿಯೋ ಭಾರೀ ಚರ್ಚೆಗೆ ಗ್ರಾಸವಾಗಿದೆ.

- Advertisement -

Latest News

error: Content is protected !!