Wednesday, June 26, 2024
HomeUncategorized7 ವರ್ಷಗಳಿಂದ ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್ ನಾಪತ್ತೆ; ಇದೀಗ ಡಿ ಗ್ಯಾಂಗ್ ಸುತ್ತ...

7 ವರ್ಷಗಳಿಂದ ನಟ ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್ ನಾಪತ್ತೆ; ಇದೀಗ ಡಿ ಗ್ಯಾಂಗ್ ಸುತ್ತ ಅನುಮಾನದ ಹುತ್ತ

spot_img
- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್ ಆಗುತ್ತಿದ್ದಂತೆ ಇದೀಗ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆಯಾಗಿರೋದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮಲ್ಲಿಕಾರ್ಜುನ್ ಬದುಕಿರುವ ಸಾಧ್ಯತೆ ಕಮ್ಮಿ ಅನ್ನೋ ಮಾತುಗಳು ಕೇಳಿ ಬರುತ್ತಿವೆ .

ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ ಅವರು ದರ್ಶನ್ ಹೆಸರು ಹೇಳಿ ಹತ್ತಾರು ಕೋಟಿ ಸಾಲ ಪಡೆದು ಮೋಸ ಮಾಡಿದ್ದರು. ಪ್ರೇಮ ಬರಹ ಸಿನಿಮಾದ ವಿರತಣಾ ಜವಾಬ್ದಾರಿಯನ್ನು ತೂಗುದೀಪಾಪ್ರೊಡಕ್ಷನ್ಸ್​ಗೆ ನೀಡಲಾಗಿತ್ತು. ಅದರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದು ಮಲ್ಲಿಕಾರ್ಜುನ್​ ಅವರೇ. ಸಿನಿಮಾ ಹಕ್ಕು ವಿತರಿಸಿ, ಹಣ ಬಂದ ನಂತರ ಮಲ್ಲಿಕಾರ್ಜುನ್​ ಹಣ ತೆಗೆದುಕೊಂಡು ಪರಾರಿಯಾಗಿದ್ದರು.

ಸುಮಾರು 7 ವರ್ಷಗಳ ಹಿಂದಿನ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್ ಇದೂವರೆಗೂ ದರ್ಶನ್ ಕೈಗೆ ಸಿಕ್ಕಿಲ್ಲ ಎನ್ನಲಾಗಿದೆ. ಮಲ್ಲಿಕಾರ್ಜುನ್ ಎಲ್ಲಿದ್ದಾನೆ? ಯಾವ ಊರಲ್ಲಿ ಇದ್ದಾನೆ? ಯಾವ ದೇಶದಲ್ಲಿದ್ದಾನೆ? ಇದ್ಯಾವ ಸುಳಿವು ಇದೂವರೆಗೂ ಯಾರಿಗೂ ಗೊತ್ತಿಲ್ಲ ಎನ್ನಲಾಗಿದ್ದು, ಸದ್ಯ ರೇಣುಕಸ್ವಾಮಿ ಪ್ರಕರಣ ಹೊರ ಬಂದ ಬಳಿಕ ಈತನ ಬಗ್ಗೆ ಕೂಡ ಅನುಮಾನ ದಟ್ಟವಾಗಿದೆ.

- Advertisement -
spot_img

Latest News

error: Content is protected !!