Saturday, June 28, 2025
Homeತಾಜಾ ಸುದ್ದಿಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ ಘೋಷಣೆ

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​ ಮದುವೆ ದಿನಾಂಕ ಘೋಷಣೆ

spot_img
- Advertisement -
- Advertisement -

ಬೆಂಗಳೂರು: ಕೆಲವು ವರ್ಷಗಳಿಂದ ಲವ್ ಮಾಡ್ತಿದ್ದ ಡಾರ್ಲಿಂಗ್​ ಕೃಷ್ಣ ಹಾಗೂ ಮಿಲನಾ ನಾಗ್​ರಾಜ್​ ಜೋಡಿ ಹೊಸ ಬಾಳಿಗೆ ಎಂಟ್ರಿ ಕೊಡಲು ಸೂಕ್ತ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಮುಂದಿನ ವರ್ಷದ ಪ್ರೇಮಿಗಳ ದಿನದಂದೇ (ಫೆಬ್ರವರಿ 14) ‘ಲವ್ ಮಾಕ್ಟೇಲ್’ ಜೋಡಿಯ ಮದುವೆ ನೆರವೇರಲಿದೆ.

ಮದುವೆಗೆ ದಿನಾಂಕ ನಿಗದಿಯಾದ ಬಗ್ಗೆ ನಟ ಕೃಷ್ಣ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದಾರೆ. ನಮ್ಮ ಮದುವೆ ದಿನವನ್ನು ತಿಳಿಸಲು ಸಂತೋಷವಾಗುತ್ತಿದೆ. ಫೆಬ್ರವರಿ 14, 2021 ರಂದು ಮದುವೆ ನಡೆಯಲಿದೆ. ನಮ್ಮನ್ನು ಆಶೀರ್ವದಿಸಿ ಎಂದು ಅವರು ತಿಳಿಸಿದ್ದಾರೆ.

ಕೆಲವು ವರ್ಷಗಳಿಂದ ನಟ ಕೃಷ್ಣ ಮತ್ತು ಮಿಲನ ಪ್ರೀತಿಸುತ್ತಿದ್ದರು. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಸದ್ಯ, ಇಬ್ಬರೂ ‘ಲವ್​ ಮಾಕ್​ಟೈಲ್​-2’ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾವೂ ಮುಂದಿನ ವರ್ಷ ತೆರೆ ಕಾಣಲಿದೆ.

- Advertisement -
spot_img

Latest News

error: Content is protected !!