Friday, June 5, 2026
Homeತಾಜಾ ಸುದ್ದಿಹುಬ್ಬಳ್ಳಿ ಗಲಭೆ ಪ್ರರಕಣ- ಗಲಭೆಕೋರರಿಂದಲೇ ಹಾನಿ ನಷ್ಟ ವಸೂಲಿ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ ಗಲಭೆ ಪ್ರರಕಣ- ಗಲಭೆಕೋರರಿಂದಲೇ ಹಾನಿ ನಷ್ಟ ವಸೂಲಿ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

- Advertisement -
- Advertisement -

ಶಿವಮೊಗ್ಗ: ಹುಬ್ಬಳ್ಳಿ ಗಲಭೆ ಪ್ರರಕಣದಲ್ಲಿ ಅಪಾರ ಆಸ್ತಿ ಹಾನಿಯಾಗಿದೆ. ಅದರ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಮಾಜದ ಶಾಂತಿ, ಸೌಹಾರ್ದಕ್ಕೆ ಧಕ್ಕೆ ತರುವವರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹುಬ್ಬಳ್ಳಿ ಗಲಭೆಯಲ್ಲಿ ಆಗಿರುವ ಆಸ್ತಿ ಹಾನಿಯ ಬಗ್ಗೆ ಪರಿಶೀಲಿಸಲಾಗಿದೆ. ಈ ಎಲ್ಲಾ ಹಾನಿಯ ಮೊತ್ತವನ್ನು ಗಲಭೆಕೋರರಿಂದಲೇ ಭರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಗಲಭೆಗಳ ನಿಯಂತ್ರಣಕ್ಕೆ ಸರ್ಕಾರ ಸಶಕ್ತವಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ವಹಿಸುವುದು ಅವಶ್ಯ. ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿ ಇಲ್ಲಿ ಅನಗತ್ಯ. ನಮ್ಮ ನೆಲದ ಕಾನೂನು ಹೇಗಿದೆ ಅದರ ಮುಖಾಂತರವೇ ಕ್ರಮ ವಹಿಸಲಾಗುವುದು ಎಂದರು.

- Advertisement -

Latest News

error: Content is protected !!