Friday, May 17, 2024
Homeಕರಾವಳಿಜುಲೈ 29ರಿಂದ ಆಗಸ್ಟ್‌ 1ರವರೆಗೆ ಸಂಜೆ 6ಗಂಟೆಗೆ ಎಲ್ಲ ವ್ಯವಹಾರಗಳು ಬಂದ್‌: ಜಿಲ್ಲಾಧಿಕಾರಿ ಆದೇಶ

ಜುಲೈ 29ರಿಂದ ಆಗಸ್ಟ್‌ 1ರವರೆಗೆ ಸಂಜೆ 6ಗಂಟೆಗೆ ಎಲ್ಲ ವ್ಯವಹಾರಗಳು ಬಂದ್‌: ಜಿಲ್ಲಾಧಿಕಾರಿ ಆದೇಶ

spot_img
- Advertisement -
- Advertisement -

ಒಂದೇ ವಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಸರಣಿ ಕೊಲೆಗಳು ನಡೆದ ಹಿನ್ನಲೆಯಲ್ಲಿ ಜುಲೈ 29 ರಿಂದ ಆಗಸ್ಟ್‌ 1ರವರೆಗೆ ಅಗತ್ಯ ಸೇವೆಯನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಟ್ಟುಗಳನ್ನು ಸಂಜೆ 6 ಗಂಟೆಯ ಒಳಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.

ಸುರತ್ಕಲ್ ನಲ್ಲಿ ಗುರುವಾರ ತಡರಾತ್ರಿ ನಡೆದ ಮುಸ್ಲಿಂ ಯುವಕನ ಕೊಲೆ ಹಿನ್ನಲೆಯಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈಗಾಗಾಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು ದಕ್ಷಿಣ ಕನ್ನಡ ಜಿಲೆಯಾದ್ಯಂತ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಗತ್ಯ ಸೇವೆಗಳು, ಮೆಡಿಕಲ್ ಹಾಗೂ ಆಸ್ಪತ್ರೆ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳು ಶುಕ್ರವಾರದಿಂದ ಆಗಸ್ಟ್ 1ರವರೆಗೆ ಸಂಜೆ 6ರವರೆಗೆ ಮಾತ್ರ ವ್ಯವಹರಿಸಲು ಅವಕಾಶವಿರುತ್ತದೆ” ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಆದೇಶವನ್ನು ಮೀರಿ ಅಂಗಡಿಗಳು ತೆರೆಯದಂತೆ ಸ್ಥಳೀಯ ಆಡಳಿತ ಎಲ್ಲ ರೀತಿಯಲ್ಲಿ ನಿಗಾವಹಿಸಬೇಕು. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಮರುಸ್ಥಾಪಿಸಲು ಜಿಲ್ಲೆಯ ಜನರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.ಯಾವುದೇ ತುರ್ತು ಸೇವೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲವೆಂದು ಅವರು ವಿವರಿಸಿದ್ದಾರೆ.

- Advertisement -
spot_img

Latest News

error: Content is protected !!