ಮೇಷ ರಾಶಿ: ನಿಮ್ಮ ಉತ್ಸಾಹವು ಉತ್ತುಂಗದಲ್ಲಿರಬಹುದು. ಕೆಲವು ಹಣಕಾಸಿನ ವಿಷಯಗಳಿಗೆ ದಿನವು ಶುಭಕರವಾಗಿದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಜಾಗರೂಕರಾಗಿರಬೇಕು. ಕೆಲವು ಜನರು ಸಣ್ಣ ರಜೆಯನ್ನು ಯೋಜಿಸಬಹುದು. ಅಶ್ವತ್ಥ ವೃಕ್ಷಕ್ಕೆ ನೀರು ಸುರಿಯಿರಿ, ದಿನ ಚೆನ್ನಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ.
ವೃಷಭ: ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಧನಾರ್ಜನೆ ಉತ್ತಮವಾಗಿದ್ದರೂ ಪರರಿಗೆ ಸಹಾಯ ಮಾಡು ವಾಗ ಎಚ್ಚರಿಕೆ ವಹಿಸಿ. ಎಲ್ಲಾ ಪರಿಶ್ರಮಕ್ಕೆ ಬಂಧುಮಿತ್ರರ ಸಹಕಾರ.
ಮಿಥುನ: ಉದ್ಯೋಗ ವ್ಯವಹಾರ ಗಳಲ್ಲಿ ಹೆಚ್ಚಿನ ಜವಾಬ್ದಾರಿ ಪರಿಶ್ರಮದಿಂದ ದೇಹಾಯಾಸ ಕಂಡೀತು. ಮಾನಸಿಕ ಆರೋಗ್ಯ, ಸುದೃಢತೆಯಿಂದ ಎಲ್ಲ ವ್ಯವಹಾರಗಳಲ್ಲಿ ಗುರಿ ಸಾಧಿಸಿದ ತೃಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕಟಕ: ಯೋಜನೆಗಳಿಗೆ ಪೂರ್ವ ತಯಾರಿ ಮಾಡುವ ಅಗತ್ಯತೆ ಕಂಡುಬರುವುದು. ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವುದು ಒಳಿತು.
ಸಿಂಹ: ದೈಹಿಕ ಮಾನಸಿಕ ಆರೋಗ್ಯ ಸುದೃಢ. ಧನಾರ್ಜನೆ ಸ್ಥಿರ. ಅನ್ಯರಿಗೆ ಹಣ ನೀಡುವುದಿದ್ದರೆ ಸರಿಯಾದ ದಾಖಲಾತಿಗಳೊಂದಿಗೆ ವ್ಯವಹರಿಸಿ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ ಕೂಡಿಬರುವುದು.
ಕನ್ಯಾ: ಆರೋಗ್ಯದಲ್ಲಿ ಸುಧಾರಣೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್ ಚತುರತೆ ಸಂದರ್ಭಕ್ಕೆ ಸರಿ ಯಾಗಿ ನಿಪುಣತೆಯ ನಿರ್ಣಯ. ಭೂಮಿ ಆಸ್ತಿ ವಿಚಾರ ಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ತುಲಾ ರಾಶಿ: ಹೃದಯದಲ್ಲಿ ಹೊಸ ಉತ್ಸಾಹ ಇರುತ್ತದೆ. ನೀವು ಕೆಲವು ಉತ್ತಮ ಅವಕಾಶಗಳನ್ನು ಪಡೆಯುತ್ತೀರಿ. ಹೊಸ ಒಪ್ಪಂದವನ್ನು ಮಾಡುವ ಮೊದಲು, ಅವರ ಕಾನೂನುಬದಿಯನ್ನು ಪರಿಗಣಿಸಿ. ಅಧಿಕಾರಿಗಳು ಪ್ರಮುಖ ಜವಾಬ್ದಾರಿಗಳನ್ನು ನಿಯೋಜಿಸಬಹುದು. ಮನೆಯಲ್ಲಿ ಬದಲಾವಣೆಯ ಸಾಧ್ಯತೆ ಇದೆ. ನೀವು ಹೊಸ ಮನೆಯನ್ನು ಖರೀದಿಸಬಹುದು. ವಿವಾಹಿತರ ಮನೆಯ ಜೀವನವು ಸಾಮಾನ್ಯವಾಗಿರುತ್ತದೆ.
ವೃಶ್ಚಿಕ: ಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು.
ಧನು: ಆರೋಗ್ಯ ಸುದೃಢ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ, ಮೇಲಧಿಕಾರಿಗಳ, ಗಣ್ಯರ ಸಹಕಾರ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸೌಲಭ್ಯ. ದಾಂಪತ್ಯ ತೃಪ್ತಿದಾಯಕ.
ಮಕರ: ಮಾನಸಮ್ಮಾನಗಳು ದೊರೆಯುವವು. ಕಂಕಣಬಲ ಕೂಡಿಬರುವುದು. ಮನೋಭಿಲಾಷೆಗಳು ಈಡೇರುವವು. ಆದರೆ ಉದ್ಯೋಗದಲ್ಲಿ ನಿರಾಸಕ್ತಿಯನ್ನು ಇರುವುದು ಮತ್ತು ವ್ಯವಹಾರದಲ್ಲಿ ಅಸಮಾಧಾನ ಕಂಡುಬರುವುದು.
ಕುಂಭ ರಾಶಿ: ನಿಮ್ಮ ಹರ್ಷಚಿತ್ತದ ವರ್ತನೆಯು ಜನರನ್ನು ನಿಮ್ಮ ಕಡೆಗೆ ಆಕರ್ಷಿಸುತ್ತದೆ. ನೀವು ಮಕ್ಕಳೊಂದಿಗೆ ಆನ್ಲೈನ್ನಲ್ಲಿ ಶಾಪಿಂಗ್ ಮಾಡಬಹುದು. ನಿಮ್ಮ ಶತ್ರುಗಳು ನಿಮಗೆ ಹಾನಿ ಮಾಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ, ಜಾಗರೂಕರಾಗಿರಿ. ಕೆಲವು ಕೆಲಸಗಳಲ್ಲಿ ನಿಮ್ಮ ಪ್ರೀತಿಪಾತ್ರರ ಸಹಾಯವನ್ನು ನೀವು ತೆಗೆದುಕೊಳ್ಳಬಹುದು.
ಮೀನ: ಅನಿರೀಕ್ಷಿತ ಧನ ನಷ್ಟ. ತಿರುಗಾಟ ಒದಗಿಬಂದು, ದೇಹಾಲಸ್ಯವು ತಲೆ ದೋರುವುದು, ಅರ್ಥಾರ್ಜನೆಯ ಮಾರ್ಗವು ಸುಗಮವಿದ್ದು, ಸಾಂಸಾರಿಕ ದೃಷ್ಟಿಯಲ್ಲೂ ಉತ್ತಮವಿರುವುದರಿಂದ ಚಿಂತೆಯ ಅವಶ್ಯಕತೆ ಇಲ್ಲ.