Saturday, June 6, 2026
Homeತಾಜಾ ಸುದ್ದಿಅಲ್ಪಸಂಖ್ಯಾತರು ಭಯೋತ್ಪಾದನೆಯಡಿ ಒಂದಾದರೆ ಇಡೀ ಜಗತ್ತಿಗೇ ಮಾರಕ: ಎ.ನಾರಾಯಣ ಸ್ವಾಮಿ

ಅಲ್ಪಸಂಖ್ಯಾತರು ಭಯೋತ್ಪಾದನೆಯಡಿ ಒಂದಾದರೆ ಇಡೀ ಜಗತ್ತಿಗೇ ಮಾರಕ: ಎ.ನಾರಾಯಣ ಸ್ವಾಮಿ

- Advertisement -
- Advertisement -

ಚಿತ್ರದುರ್ಗ: ಅಲ್ಪಸಂಖ್ಯಾತರು ಭಯೋತ್ಪಾದನೆಯಡಿ ಒಂದಾದರೆ ಇಡೀ ಜಗತ್ತಿಗೇ ಇಂಥಹ ಬೆಳವಣಿಗೆ ಮಾರಕವಾಗುತ್ತದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.


ಅಫ್ಘಾನಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟು ಭಾರತದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೂ ಭಾರತ ಎಚ್ಚರಿಕೆಯಿಂದ ಇರಬೇಕು. ಇದು ಪ್ರಜಾಪ್ರಭುತ್ವದ ಮೇಲೆ ಆಗಿರುವ ದೊಡ್ಡ ದಾಳಿ. ಇಡೀ ವಿಶ್ವ ಎಚ್ಚರಿಕೆಯಿಂದ ಇರಬೇಕು. ಈ ಕುರಿತು ಭಾರತ ಏಕಾಏಕೀ ತಿರ್ಮಾನ ತೆಗೆದುಕೊಳ್ಳುವುದಿಲ್ಲ. ಶ್ರೀಲಂಕದ ಎಲ್ ಟಿಟಿಇ ಮೇಲೆ ಭಾರತ ಕ್ರಮ ಕೈಗೊಂಡ ಪರಿಣಾಮ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ಕಳೆದುಕೊಳ್ಳಬೇಕಾಯಿತು. ಹೀಗಾಗಿ ಈ ಬಗ್ಗೆ ನಮ್ಮ ದೇಶದ ಪ್ರಧಾನ ಮಂತ್ರಿ ಮೋದಿಯವರು ಅಫ್ಘಾನಿಸ್ತಾನ್ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಲಿದ್ದಾರೆ ಎಂದರು.

- Advertisement -

Latest News

error: Content is protected !!