Saturday, April 27, 2024
Homeಜ್ಯೋತಿಷ್ಯಬುಧವಾರದ ದಿನಭವಿಷ್ಯ: ಯಾವ ರಾಶಿಯವರಿಗೆ ಇಂದು ಶುಭದಿನ ?

ಬುಧವಾರದ ದಿನಭವಿಷ್ಯ: ಯಾವ ರಾಶಿಯವರಿಗೆ ಇಂದು ಶುಭದಿನ ?

spot_img
- Advertisement -
- Advertisement -

ಮೇಷ:
ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆ ವಹಿಸಿರಿ.
ಶುಭ ಸಂಖ್ಯೆ: 1

ವೃಷಭ:
ಸಮಾಧಾನಕರ ಜೀವನವಿದೆ. ಅಧಿಕಾರಿಗಳ ಸಹಕಾರ ದೊರೆಯುವುದು. ಮನೆ ಕಟ್ಟುವ ಆಸೆ ಕೈಗೂಡುವ ಸಮಯ. ಬಂಧುಮಿತ್ರರ ಹಾರೈಕೆ ತಮ್ಮೊಂದಿಗಿದೆ. ದೂರಪ್ರಯಾಣ ಯೋಗವಿದೆ.
ಶುಭ ಸಂಖ್ಯೆ: 9

ಮಿಥುನ:
ವ್ಯಕ್ತಿತ್ವಕ್ಕೆ ತಕ್ಕ ಗೌರವಗಳು ದೊರೆಯುವವು. ಚಾಣಾಕ್ಷತನದಿಂದ ಕಷ್ಟ ಪರಿಹರಿಸಿಕೊಳ್ಳುವಿರಿ. ಅಪೇಕ್ಷಿತ ಕಾರ್ಯಗಳು ಕೈಗೂಡುವವು. ಸಂಬಂಧಿಗಳಿಂದ ಸಹಕಾರ ದೊರೆಯುವುದು. ದೂರ ಪ್ರಯಾಣ, ಪರಸ್ಥಳ ವಾಸ ಸಂಭವ.
ಶುಭ ಸಂಖ್ಯೆ: 2

ಕಟಕ:
ಒಳ್ಳೆಯ ಮಾತುಗಳಿಂದ ಸಂಬಂಧ ಸುಧಾರಿಸುವುದು. ಸ್ನೇಹಿತರಲ್ಲಿಯ ಮನಸ್ತಾಪ ದೂರಾಗುವುದು. ಶಕ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವುದು. ಉದ್ಯೋಗದ ಹೊರತಾಗಿ ಬೇರೆ ಕೆಲಸಕ್ಕೂ ಗಮನಹರಿಸಿ.
ಶುಭ ಸಂಖ್ಯೆ: 8

ಸಿಂಹ:
ವ್ಯವಹಾರಿಕ ಸಂಪರ್ಕಗಳು ಹೆಚ್ಚುವವು ಅದರಂತೆ ಧನದ ಮೂಲಗಳೂ ಹೆಚ್ಚುವವು. ಸಾಲ ಮರುಪಾವತಿಯಾಗುವುದು. ಮನೆಯಲ್ಲಿ ನೆಮ್ಮದಿ ಇರುವುದು. ಅವಿವಾಹಿತರಿಗೆ ಕಂಕಣಬಲ ಕೂಡಿಬರುವುದು.
ಶುಭ ಸಂಖ್ಯೆ: 3

ಕನ್ಯಾ:
ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯಪ್ರವೃತ್ತಿಯು ಉತ್ತಮ ಫಲಕೊಡುವುದು. ಹಳೆಯ ಬಾಕಿ ವಸೂಲಾಗುವುದು. ವ್ಯಾಜ್ಯಗಳು ಅಂತ್ಯಕಾಣುವವು. ಗ್ರಹ ಸೌಖ್ಯವಿರುವುದು.
ಶುಭ ಸಂಖ್ಯೆ: 7

ತುಲಾ:
ಹೊಸ ಯೋಜನೆಗೆ ಸಂಬಂಧಿಸಿದಂತೆ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ತೊಂದರೆ ಇದ್ದರೂ ನಿಭಾಯಿಸುವಲ್ಲಿ ಸಫಲರಾಗುವಿರಿ. ಬುದ್ಧಿ ಚಂಚಲವಾಗಿ ಹಿಡಿದ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ.
ಶುಭ ಸಂಖ್ಯೆ: 4

ವೃಶ್ಚಿಕ:
ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ.
ಶುಭ ಸಂಖ್ಯೆ: 6

ಧನು:
ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ.
ಶುಭ ಸಂಖ್ಯೆ: 5

ಮಕರ:
ವ್ಯವಹಾರದಲ್ಲಿ ಹಾನಿ ಕಂಡುಬರುವುದು. ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಂಭವವಿದೆ. ಸಹೋದರರು, ಮಿತ್ರರು ಬೆನ್ನೆಲುಬಾಗಿ ನಿಲ್ಲುವರು. ಧೈರ್ಯದಿಂದ ಮಾಡುವ ಕಾರ್ಯ ಉತ್ತಮ ಫಲಕೊಡುವುದು.
ಶುಭ ಸಂಖ್ಯೆ: 9

ಕುಂಭ:
ಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವುದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು.
ಶುಭ ಸಂಖ್ಯೆ: 1

ಮೀನ:
ಯಶಸ್ಸು. ಶ್ರಮಕ್ಕೆ ತಕ್ಕ ಲಾಭ, ಕೀರ್ತಿ, ಕೃಷಿಯಲ್ಲಿ ಉತ್ತಮ ಸಾಧನೆ, ಮನೆಯಲ್ಲಿ ಮಂಗಳಕಾರ್ಯ, ಬುಧ, ಮಂಗಳ ಯೋಗ ಶುಭದಾಯಕ ಆದರೂ ಕಿರಿಕಿರಿ ಸಂಭವ. ಪರಿಹಾರಕ್ಕಾಗಿ ಅನ್ನದಾನ ಮಾಡಿರಿ.
ಶುಭ ಸಂಖ್ಯೆ: 7

- Advertisement -
spot_img

Latest News

error: Content is protected !!