Wednesday, May 8, 2024
Homeಕರಾವಳಿಪೊಲೀಸ್ ಚಕ್ ಪೋಸ್ಟ್ ಬಳಿ ನಡೆದ ಯುವಕನ ಸಾವಿಗೆ ಪೋಲಿಸರೇ ನೇರ ಹೊಣೆ -ಎಸ್ ಡಿಪಿಐ

ಪೊಲೀಸ್ ಚಕ್ ಪೋಸ್ಟ್ ಬಳಿ ನಡೆದ ಯುವಕನ ಸಾವಿಗೆ ಪೋಲಿಸರೇ ನೇರ ಹೊಣೆ -ಎಸ್ ಡಿಪಿಐ

spot_img
- Advertisement -
- Advertisement -

ಕಡಬ: ಮಧ್ಯಾಹ್ನ ಎರಡು ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಮತ್ತು ಅಗತ್ಯ ಕಾರ್ಯಗಳಿಗಾಗಿ ಹೊರಗಡೆ ತೆರಳಲು ಅವಕಾಶ ಇದ್ದರೂ ಕೂಡ ಕಡಬ ಪೋಲಿಸರು ಮಾತ್ರ ಕಠಿಣ ಕ್ರಮ ಕೈಗೊಳ್ಳುವ ನೆಪದಲ್ಲಿ ಆತೂರು ಪೇಟೆಯಲ್ಲಿ ಹನ್ನೆರಡು ಗಂಟೆಗೆ ತಪಾಸಣೆ ನಡೆಸಲು ಆರಂಭಿಸಿ ಯುವಕನ ಸಾವಿಗೆ ನೇರ ಕಾರಣವಾಗಿದ್ದಾರೆ.

ಪೋಲಿಸರ ಇಂತಹ ಅಮಾನವೀಯ ನಡೆಯಿಂದ ಅಮಾಯಕ ಯುವಕ ಪ್ರಾಣ ಕಳೆದುಕೊಳ್ಳಬೇಕಾಗಿ ಬಂದಿದೆ. ಸಾರ್ವಜನಿಕರಿಗೆ ಹೊರಗಡೆ ಅಗತ್ಯ ಕಾರ್ಯಗಳಿಗೆ ತೆರಳಲು ಸೀಮಿತ ಅವಧಿಯ ಸಮಯವಿದ್ದರೂ ಈ ಸಂದರ್ಭದಲ್ಲಿ ಕೂಡ ಸಾರ್ವಜನಿಕರಿಗೆ ತಪಾಸಣೆಯ ನೆಪದಲ್ಲಿ ಕಿರುಕುಳ ನೀಡಿ ಯುವಕನ ಸಾವಿಗೆ ಕಾರಣವಾದ ಪೋಲಿಸರ ನಡೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸುತ್ತದೆ‌.

ಇಂತಹ ಘಟನೆ ನಡೆದ ಸಂದರ್ಭಗಳಲ್ಲಿ ಸಾರ್ವಜನಿಕರು ಆಕ್ರೋಶಿತರಾಗುವುದು ಸ್ವಾಭಾವಿಕವಾಗಿದೆ. ಈ ಸಮಯದಲ್ಲಿ ಪೋಲಿಸರು ಸಾರ್ವಜನಿಕರನ್ನು ಸಮದಾನಪಡಿಸಿ ಆಕ್ರೋಶಿತ ಗುಂಪನ್ನು ತಣ್ಣಗಾಗಿಸಬೇಕೆ ಹೊರತು ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಪ್ರಚೋದನೆಗೆ ಒಳಪಡಿಸುವುದು ಸರಿಯಲ್ಲ.

ಕಡಬ ಪೋಲಿಸರ ಇಂತಹ ನಡೆಯ ವಿರುದ್ಧ ಈ ಹಿಂದೆಯು ಸಾರ್ವಜನಿಕರು ದೂರಿಕೊಂಡಿದ್ದರು,ಆದರೆ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯತೇ ತೋರಿದ್ದೆ ಇವತ್ತು ಇಂತಹ ಘಟನೆ ನಡೆಯಲು ಕಾರಣವಾಗಿದೆ. ಹಾಗಾಗಿ ಈ ಘಟನೆಯಲ್ಲಿ ತಪ್ಪಿತಸ್ಥ ಪೋಲಿಸರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಕೂಡಲೇ ಪರಿಹಾರ ಧನ ಒದಗಿಸಬೇಕೆಂದು ಎಸ್‌ಡಿಪಿಐ ಕಡಬ ತಾಲೂಕು ಸಮಿತಿ ಕಾರ್ಯದರ್ಶಿ ರಫೀಕ್ ನೆಲ್ಯಾಡಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!