Friday, April 26, 2024
Homeಜ್ಯೋತಿಷ್ಯಶನಿವಾರದ ನಿತ್ಯಭವಿಷ್ಯ: ಹೇಗಿರಲಿದೆ ನಿತ್ಯಭವಿಷ್ಯ, ರಾಶಿಫಲ ಮತ್ತು ಇಂದಿನ ನಿಮ್ಮ ಶುಭಸಂಖ್ಯೆ?

ಶನಿವಾರದ ನಿತ್ಯಭವಿಷ್ಯ: ಹೇಗಿರಲಿದೆ ನಿತ್ಯಭವಿಷ್ಯ, ರಾಶಿಫಲ ಮತ್ತು ಇಂದಿನ ನಿಮ್ಮ ಶುಭಸಂಖ್ಯೆ?

spot_img
- Advertisement -
- Advertisement -

ನಿತ್ಯ ಪಂಚಾಂಗ:
ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು , ಶುಕ್ಲಪಕ್ಷ, ಬಿದಿಗೆ ತಿಥಿ, ಶನಿವಾರ, ಶತಭಿಷೆ ನಕ್ಷತ್ರ,
ರಾಹುಕಾಲ: ಇಂದು ಬೆಳಿಗ್ಗೆ 9:36 ರಿಂದ ಬೆಳಿಗ್ಗೆ 11:2ವರೆಗೆ.
ಸೂರ್ಯೋದಯ: ಬೆಳಿಗ್ಗೆ 6.43. ಸೂರ್ಯಾಸ್ತ: ಸಂಜೆ 6.16.

ಮೇಷ
ಗುರಿಸಾಧನೆಗೆ ಇದು ಸೂಕ್ತ ಸಮಯ. ಪ್ರಯತ್ನಿಸಿದ ಕಾರ್ಯಗಳು ಕೈಗೂಡುವವು. ವಿದ್ಯಾರ್ಥಿಗಳಿಗೆ ಉನ್ನತ ಪ್ರಶಸ್ತಿ ದೊರಕುವ ಸಾಧ್ಯತೆ ಇರುವದು. ವಿರೋಧಿಗಳಿಂದ ಟೀಕೆ ಆದರೆ ನಿಮ್ಮ ಸಾಧನೆಯಿಂದ ಮರು ಉತ್ತರ ನೀಡುವಿರಿ, ಮಾತಾಪಿತೃ ಸೇವೆ ಮಾಡುವ ಸೌಭಾಗ್ಯ ನಿಮ್ಮದು. ಪ್ರೇಮ ಸಂಭಾಷಣೆ ಮುಂದುವರೆಯಲಿದೆ. ಸ್ಥಿರಾಸ್ತಿ ಮಾರಾಟ ಅಥವಾ ಖರೀದಿ ಸಂಭವ. ವಿದೇಶ ಪ್ರಯಾಣ ಅವಕಾಶ ಸಿಗಲಿದೆ.
ಶುಭ ಸಂಖ್ಯೆ: 8

ವೃಷಭ
ಅನಿರೀಕ್ಷಿತ ಧನಲಾಭವಾಗುವದು. ಬುದ್ಧಿಕೌಶಲ್ಯದಿಂದ ಉದ್ಯೋಗದಲ್ಲಿ ಬಡ್ತಿ ಕಂಡುಬರುವದು. ಸಿಟ್ಟಿನ ಸ್ವಭಾವದಿಂದ ತೊದರೆಯಾಗುವ ಸಾಧ್ಯತೆ ಇದೆ. ಕಾರ್ಯಕ್ಷಮತೆಗೆ ತಕ್ಕ ಫಲ ದೊರೆಯುವದು. ಕೆಲಸದ ಪ್ರದೇಶದಲ್ಲಿ ನಿಮ್ಮ ಯಾವುದೇ ಸ್ಪರ್ಧಿಗಳು ಇಂದು ನಿಮ್ಮ ವಿರುದ್ಧ ಸಂಚು ರೂಪಿಸಬಹುದು, ಆದ್ದರಿಂದ ಇಂದು ನೀವು ಕಣ್ಣು ಮತ್ತು ಕಿವಿಗಳನ್ನು ತೆರೆದುಕೆಲಸ ಮಾಡುವ ಅಗತ್ಯವಿದೆ.
ಶುಭ ಸಂಖ್ಯೆ: 6

ಮಿಥುನ
ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು.ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು. ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮ ಜೀವನ ಸಂಗಾತಿಯ ಜೊತೆ ನೀವು ಹೊಂದಿದ ಹಳೆಯ ಸುಂದರ ನೆನಪುಗಳನ್ನು ಮತ್ತೆ ನೆನಪಿಸಬಹುದು. ನಿಮ್ಮನ್ನು ಫಿಟ್ ಆಗಿ ಮತ್ತು ಚೆನ್ನಾಗಿರಿಸಿಕೊಳ್ಳಲು ಹೆಚ್ಚಿನ ಕ್ಯಾಲೊರಿಯ ಆಹಾರವನ್ನು ತಪ್ಪಿಸಿ.
ಶುಭ ಸಂಖ್ಯೆ: 1

ಕರ್ಕ
ಆಸ್ತಿ ಖರೀದಿ ಅಥವಾ ಮಾರಾಟದ ವ್ಯವಹಾರಗಳು ಕುದುರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಯೋಗ್ಯತಾ ಮೀರಿ ದುಡಿಯುವ ಕಾರ್ಯಭಾರವಿರುವದು. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಯೋಗವಿದೆ. ಮೊದಲೇ ಯೋಜಿಸಿದ ಪ್ರಯಾಣದ ಕಾರ್ಯಕ್ರಮಗಳು ಕುಟುಂಬದಲ್ಲಿನ ಆರೋಗ್ಯದ ಸಮಸ್ಯೆಗಳಿಂದಾಗಿ ಮುಂದೂಡಲಾಗಬಹುದು. ನಿಮ್ಮ ಪ್ರೇಮಿಯ ಜೊತೆ ಹೊರಹೋದಾಗ ನಿಮ್ಮ ರೂಪ ಮತ್ತು ವರ್ತನೆಯಲ್ಲಿ ನೈಜತೆಯಿರಲಿ.
ಶುಭ ಸಂಖ್ಯೆ: 4

ಸಿಂಹ
ವಸ್ತು-ವಾಹನ-ಆಸ್ತಿ ಖರೀದಿ ಯೋಗವಿದೆ.ಅನವಶ್ಯಕ ಅಲೆದಾಟದ ಸಾದ್ಯತೆ ಇದೆ. ಮನೆಯ ಹಿರಿಯರ ಆರೋಗ್ಯದ ಚಿಂತೆ ಇರುವದು. ಬುದ್ಧಿವಂತಿಕೆಯಿಂದ ದೊಡ್ಡ ಕೆಲಸವನ್ನೂ ಸಹಜವಾಗಿ ಮಾಡುವಿರಿ. ಕಲೆ ಮತ್ತು ರಂಗಭೂಮಿಯ ಜೊತೆ ಸಂಪರ್ಕ ಹೊಂದಿರುವವರು ಸೃಜನಶೀಲವಾಗಿ ಅತ್ಯುತ್ತಮವಾದದ್ದನ್ನು ನೀಡಲು ಹೊಸ ಅವಕಾಶಗಳನ್ನು ಪಡೆಯುತ್ತಾರೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ.
ಶುಭ ಸಂಖ್ಯೆ: 3

ಕನ್ಯಾ
ಅತಿಯಾದ ಮಾತು ಅಪಾಯಕ್ಕೆ ಕಾರಣ. ಆಲಸ್ಯದಿಂದ ಕಾರ್ಯಹಾನಿಯಾಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರಗಳಲ್ಲಿ ತಜ್ಞರ ಸಹಾಯ ಪಡೆಯಿರಿ. ನೌಕರರಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆಯ ಆಗುವ ಯೋಗವಿದೆ. ಇಂದು ಈ ಕ್ಷಣವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ. ಇಂದು ಹಿಂದಿನ ಕೆಟ್ಟ ನಿರ್ಧಾರಗಳು ಹತಾಶೆ ಮತ್ತು ಮಾನಸಿಕ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ -ನೀವು ಮುಂದೇನು ಮಾಡಬೇಕೆಂದು ನಿರ್ಧರಿಸಲಾಗದೇ ಸಿಲುಕಿಕೊಂಡಿರಬಹುದು. ಇತರರಿಂದ ಸಹಾಯ ಪಡೆಯಿರಿ ಹಣದ ಚಲನೆ ದಿನವಿಡೀ ಮುಂದುವರಿಯುತ್ತದೆ ಮತ್ತು ದಿನದ ಅಂತ್ಯದ ನಂತರ ನೀವು ಉಳಿಸಲು ಸಾಧ್ಯವಾಗುತ್ತದೆ.
ಶುಭ ಸಂಖ್ಯೆ: 9

ತುಲಾ
ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ಕುಟುಂಬದ ಸದಸ್ಯರ ಅಗತ್ಯಗಳಿಗೆ ಆದ್ಯತೆ ನೀಡಿ. ನೀವು ಅವರ ಸಲುವಾಗಿ ಕಾಳಜಿ ತೆಗೆದುಕೊಳ್ಳುತ್ತೀರೆಂದು ಅವರಿಗೆ ಅರ್ಥವಾಗುವ ಹಾಗೆ ಅವರ ಸಂತೋಷವನ್ನು ಹಂಚಿಕೊಳ್ಳಿ. ನಿಮ್ಮ ಪ್ರೇಮಿಯನ್ನು ಭೇಟಿ ಮಾಡುತ್ತಿದ್ದ ಹಾಗೆ ನಿಮ್ಮ ಮನಸ್ಸನ್ನು ಪ್ರಣಯ ಆವರಿಸಿಕೊಳ್ಳುತ್ತದೆ.
ಶುಭ ಸಂಖ್ಯೆ: 5

ವೃಶ್ಚಿಕ
ಅಪೇಕ್ಷಿತ ಸ್ಥಾನಮಾನಗಳು ದೊರೆಯುವವು. ಮಹತ್ವದ ಕಾರ್ಯ ಸಾಧನೆಯಾಗುವ ಲಕ್ಷಣಗಳಿವೆ. ಮನೆಯಲ್ಲಿ ಕೌಟುಂಬಿಕ ಭಿನ್ನಾಭಿಪ್ರಾಯ ಇದ್ದರೂ ನೆಮ್ಮದಿಗೆ ಭಂಗವಿಲ್ಲ. ಆದಾಯಕ್ಕಿಂ ಅಧಿಕ ಖರ್ಚು ಇರುವದು. ನೀವು ವಿದೇಶದಲ್ಲಿ ಕೆಲಸಕ್ಕೆ ಅರ್ಜಿ ಹಾಕುವುದನ್ನು ಪರಿಗಣಿಸುತ್ತಿದ್ದಲ್ಲಿ – ಇಂದು ಅದೃಷ್ಟದ ದಿನದಂತೆ ತೋರುತ್ತದೆ. ನೀವು ನಿಮ್ಮ ವಿವೇಚನೆಯನ್ನು ಬಳಸಿ ಮನೆಯ ಸದಸ್ಯರೊಂದಿಗೆ ಮಾತನಾಡಿ, ನೀವು ಅದನ್ನು ಮಾಡದಿದ್ದರೆ, ಕಾರಣವಿಲ್ಲದ ಜಗಳಗಳಿಂದಾಗಿ ನಿಮ್ಮಸಮಯ ಹದಗೆಡಬಹುದು.
ಶುಭ ಸಂಖ್ಯೆ: 6

ಧನು
ವೃತ್ತಿಪರೆತೆಯಿಂದ ಕಾರ್ಯ ಕೈಗೂಡುವದು. ಪರಿವಾರದೊಂದಿಗೆ ದೂರ ಪ್ರವಾಸದ ಯೋಗವಿದೆ. ಉತ್ತಮವಾದ ಸಮಯ ಇರುವದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುವದು. ಮಕ್ಕಳ ನಿಮ್ಮ ಸಂಜೆಯನ್ನು ಉಲ್ಲಾಸಮಯವಾಗಿಸುತ್ತಾರೆ. ಮಂಕು ಕವಿದ ಮತ್ತು ಒತ್ತಡದ ದಿನಕ್ಕೆ ಮಂಗಳಹಾಡಲು ಒಂದು ಸಂತೋಷಕೂಟವನ್ನು ಯೋಜಿಸಿ. ಮಕ್ಕಳ ಸಾಂಗತ್ಯ ನಿಮ್ಮ ದೇಹವನ್ನು ಪುನಃಶ್ಚೇತನಗೊಳಿಸುತ್ತದೆ.
ಶುಭ ಸಂಖ್ಯೆ: 1

ಮಕರ
ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವದು. ಮನೋಚಿಂತಿತ ಕಾರ್ಯ ಕೈಗೂಡುವದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಮಹಿಳೆಯರು ಕಠಿಣ ಸವಾಲು ಎದುರಿಸುವಿರಿ, ವ್ಯಾಪಾರಿಗಳಿಗೆ ಆರ್ಥಿಕ ಹಿನ್ನಡೆ, ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ, ತುಂಬಾ ಕಷ್ಟದಲ್ಲಿ ಇದ್ದವರು ಚೇತರಿಕೆ ಕಾಣುವರು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ರಾಜಕಾರಣಿಗಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳಿಂದ ಹೆಚ್ಚಿನ ನಿರೀಕ್ಷೆ ಸಫಲತೆ ಪಡೆಯುವಿರಿ, ಕೋರ್ಟು ವ್ಯವಹಾರಗಳಲ್ಲಿ ನಿಮ್ಮಂತೆ ನಿರ್ಣಯ, ಕುಟುಂಬದ ಪದೇಪದೇ ಕಲಹಗಳಿಂದ ಮಾನಸಿಕ ಅಶಾಂತಿ ಹೆಚ್ಚುತ್ತಿದೆ,
ಶುಭ ಸಂಖ್ಯೆ: 2

ಕುಂಭ
ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವದು. ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಲ್ಲಿ ಸಿಲುಕಿಕೊಳ್ಳದಂತೆ ಎಚ್ಚರಿಕೆ ವಹಿಸಿ. ನೀವು ಅಪರೂಪಕ್ಕೆ ಭೇಟಿ ಮಾಡುವ ಜನರನ್ನು ಸಂಪರ್ಕಿಸಲು ಒಳ್ಳೆಯದಿನ. ಪ್ರೇಮ ಜೀವನ ಭರವಸೆ ತರುತ್ತದೆ.
ಶುಭ ಸಂಖ್ಯೆ: 3

ಮೀನ
ನಿರೀಕ್ಷಿತ ಸರ್ವಕಾರ್ಯಗಳು ನೆರವೆರುತ್ತದೆ. ಆರ್ಥಿಕ ಮಟ್ಟವೂ ಏರಿ, ಸ್ಥಿರಪ್ರಾಪ್ತಿ, ಸಂಸಾರ ಸುಖ ಸಂಭ್ರಮಗಳಿರುತ್ತದೆ. ಶುಭ ಕಾರ್ಯ ಪ್ರಯತ್ನ ಫಲಕೊಡುತ್ತದೆ. ನೀವು ಸ್ವಲ್ಪ ಪ್ರೀತಿ ಹಂಚಿಕೊಂಡಲ್ಲಿ ಇಂದು ನಿಮ್ಮ ಪ್ರಿಯತಮೆ ನಿಮ್ಮ ದೇವತೆಯಾಗುತ್ತಾಳೆ. ನೀವು ಅನಿರೀಕ್ಷಿತ ಮೂಲಗಳಿಂದ ಪ್ರಮುಖ ಆಮಂತ್ರಣವನ್ನು ಸ್ವೀಕರಿಸುತ್ತೀರಿ. ಇಂದು, ನೀವು ನಿಮ್ಮ ಅರ್ಧಾಂಗಿಗೆ ಎಷ್ಟು ಮುಖ್ಯವೆಂದು ನಿಮಗೆ ಅರಿವಾಗುತ್ತದೆ. ಒಂದು ಲಾಭಕರ ದಿನ ಮತ್ತು ನೀವು ಧೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು.
ಶುಭ ಸಂಖ್ಯೆ: 7

- Advertisement -
spot_img

Latest News

error: Content is protected !!