Monday, April 29, 2024
Homeಜ್ಯೋತಿಷ್ಯದಿನಭವಿಷ್ಯ: ಈ ರಾಶಿಯವರಿಗೆ ಇಂದು ಸಹೋದ್ಯೋಗಿಗಳ ಜತೆ ಮನಸ್ತಾಪ ಸಾಧ್ಯತೆ

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸಹೋದ್ಯೋಗಿಗಳ ಜತೆ ಮನಸ್ತಾಪ ಸಾಧ್ಯತೆ

spot_img
- Advertisement -
- Advertisement -

ಮೇಷ: ವೈವಾಹಿಕ ಮಾತುಕತೆಗೆ ಕಾಲ ಕೂಡಿ ಬರುವುದು. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು, ಕೀರ್ತಿ. ಧನಲಾಭ. ಅನಾರೋಗ್ಯ ಕಾಡಲಿದೆ. ಶುಭಸಂಖ್ಯೆ: 8

ವೃಷಭ: ಸರ್ಕಾರಿ ವ್ಯವಹಾರಗಳಲ್ಲಿ ಕಾರ್ಯಸಿದ್ಧಿ. ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಗಳು ಉಂಟಾಗಬಹುದು. ಶುಭಸಂಖ್ಯೆ: 2

ಮಿಥುನ: ಮಂದಗತಿಯಲ್ಲಿ ಕಾರ್ಯಸಿದ್ಧಿ ಆಗುವುದು. ಉದ್ದಿಮೆದಾರರಿಗೆ ಮಧ್ಯಮ ಬಲ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 3

ಕಟಕ: ಹಲವು ದಿನಗಳ ಆಕಾಂಕ್ಷಿತ ಪ್ರಯತ್ನ ಸಫಲ. ನಿರೀಕ್ಷಿಸಿದಂತೆ ಧನಸಹಾಯ. ಸಹೋದ್ಯೋಗಿಗಳ ಜತೆ ಮನಸ್ತಾಪ ಸಾಧ್ಯತೆ. ಶುಭಸಂಖ್ಯೆ: 2

ಸಿಂಹ: ನಂಬಿದವರಿಂದಲೇ ಮೋಸ ಸಾಧ್ಯತೆ. ಪರಸ್ಥಳ ವಾಸ ಸಂಭವ. ಆಲೋಚಿಸದೇ ತೆಗೆದುಕೊಂಡ ನಿರ್ಣಯಗಳಿಂದ ತೊಂದರೆ. ಶುಭಸಂಖ್ಯೆ: 9

ಕನ್ಯಾ: ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆ ಕೇಳಬೇಕಾದೀತು. ಗೃಹ ನಿರ್ವಣದಲ್ಲಿ ಮುನ್ನಡೆ. ಶುಭಸಂಖ್ಯೆ: 1

ತುಲಾ: ಮನಸಿನ ಚಂಚಲತೆಯಿಂದ ಕಾರ್ಯ ವಿಘ್ನ. ಕಷ್ಟಕಾಲದಲ್ಲಿ ಆತ್ಮೀಯರ ಸಹಾಯ ಪ್ರಾಪ್ತಿ. ಸಾರ್ವಜನಿಕ ವಲಯದಲ್ಲಿ ಲಾಭ. ಶುಭಸಂಖ್ಯೆ:1

ವೃಶ್ಚಿಕ: ಕಚೇರಿಯಲ್ಲಿ ಪ್ರಾಮಾಣಿಕ ಯತ್ನಕ್ಕೆ ಮನ್ನಣೆ. ಕೆಟ್ಟ ಜನರಿಂದ ದೂರವಿರಿ. ಆಸ್ತಿ ಖರೀದಿ ಯೋಗ. ಭೂ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 4

ಧನುಸ್ಸು: ಹೊಸ ಕೆಲಸದ ಆಸೆಗೆ ಹಳೆ ಕೆಲಸ ಹೋದೀತು. ಆಮಿಷಕ್ಕೆ ಒಳಗಾಗಿ ಮೋಸ ಹೋಗದಿರಿ. ಸಂಗಾತಿಯ ಆರೋಗ್ಯ ಹುಷಾರು. ಶುಭಸಂಖ್ಯೆ: 3

ಮಕರ: ಕುಟುಂಬದಲ್ಲಿ ವಾಗ್ವಾದ ಬೇಡ. ನಿಮ್ಮ ಸಾಧನೆಗೆ ಬಂಧುಗಳ ಪ್ರಶಂಸೆ. ವ್ಯವಹಾರದ ಕುಶಲತೆಯು ಲಾಭ ತಂದುಕೊಡುವುದು. ಶುಭಸಂಖ್ಯೆ: 6

ಕುಂಭ: ಉದ್ಯೋಗ ಸಂಬಂಧಿ ಸಮಸ್ಯೆಗಳು ಎದುರಾಗಲಿವೆ. ನಿಮ್ಮ ಪರಿಶ್ರಮ ಫಲ ನೀಡುವುದು. ಅಪರಿಚಿತರೊಂದಿಗೆ ಜಾಗ್ರತೆ ಇರಲಿ. ಶುಭಸಂಖ್ಯೆ: 5

ಮೀನ: ಅದೃಷ್ಟದಿಂದ ಅಧಿಕ ಲಾಭ. ವಿದ್ಯಾರ್ಥಿಗಳ ಮನೋಭಿಲಾಷೆ ಈಡೇರುವುದು. ಹಿರಿಯರ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

- Advertisement -
spot_img

Latest News

error: Content is protected !!