Monday, June 30, 2025
Homeಜ್ಯೋತಿಷ್ಯಇಂದಿನ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭ ಶನಿವಾರ ?

ಇಂದಿನ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭ ಶನಿವಾರ ?

spot_img
- Advertisement -
- Advertisement -

ಮೇಷ :ಈ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಮಾನಸಿಕ ಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಕೆಲಸದ ಸ್ಥಳದಲ್ಲಿ ಏನಾದರೂ ಮಾಡುವ ಬಯಕೆ ಇರುತ್ತದೆ. ಇದು ಪ್ರಯೋಜನಕಾರಿಯಾಗಿದ್ದರೆ, ಅದು ಕೂಡ ತನ್ನದೇ ಸಮಯದಲ್ಲಿ ಆಗುತ್ತದೆ. ಹೌದು ಕಷ್ಟಪಟ್ಟು ಕೆಲಸ ಮಾಡುವುದು ಅವಶ್ಯಕ. ಸ್ವಲ್ಪ ವಿಳಂಬವಾದರೂ, ಅದರ ಬಗ್ಗೆ ಚಿಂತಿಸಬೇಡಿ, ಒಂದು ಅಥವಾ ಎರಡು ದಿನಗಳ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಶುಭ ಸಂಖ್ಯೆ: ೬

ವೃಷಭ: ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಪ್ರಗತಿ ಇರುವುದು. ಹಳೆಯ ಸಾಲ ತೀರುವುದು. ಅನೇಕ ಮೂಲಗಳಿಂದ ಧನಪ್ರಾಪ್ತಿಯ ಯೋಗವಿದೆ. ಬಂಧುವರ್ಗದಲ್ಲಿಯ ಅಸಮಾಧಾನಗಳು ಪರಿಹಾರವಾಗುವವು. ಶುಭ ಸಂಖ್ಯೆ: 1

ಮಿಥುನ: ವಾಸಸ್ಥಾನ, ಉದ್ಯೋಗಸ್ಥಾನ ಬದಲಾವಣೆಯ ಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ವ್ಯವಹಾರಿಕ ಸೂಕ್ಷ್ಮತೆಯಿಂದ ಹಾನಿ ತಪ್ಪಿಸಿರಿ. ವೃಥಾಚಿಂತೆ ಇರುವುದು. ಹೊಸ ವ್ಯವಹಾರಗಳು ಬೇಡ. ಶುಭ ಸಂಖ್ಯೆ: 5

ಕಟಕ: ಆಸ್ತಿ ವಿಷಯಕ್ಕೆ ಸಂಬಂಧಿಸಿಂತೆ ತೊಂದರೆಯಾಗುವ ಸಂಭವವಿದೆ. ಆದಾಯ ಉತ್ತಮವಾಗಿರುವುದು. ನೌಕರಿಯಲ್ಲಿ ಅಸಹಕಾರ ಎದುರಿಬೇಕಾಗುವುದು. ಗ್ರಹಸೌಖ್ಯವಿದ್ದರೂ ಮಾನಸಿಕ ನೆಮ್ಮದಿ ಇರಲಾರದು. ಶುಭ ಸಂಖ್ಯೆ: 2

ಸಿಂಹ: ಆತುರತೆಯ ನಿರ್ಣಯಗಳು ಅಪಾಯ ತರಬಹುದು. ಆತ್ಮೀಯರೊಂದಿಗೆ ಮನಸ್ತಾಪವಾಗುವ ಯೋಗವಿದೆ. ಅರ್ಧಕ್ಕೆನಿಂತ ಕೆಲಸಗಳು ಮುಂದುವರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಶುಭ ಸಂಖ್ಯೆ: 4

ಕನ್ಯಾ: ಅನೇಕ ರೀತಿಯ ಲಾಭ ದೊರೆಯುವ ಸಾಧ್ಯತೆ ಇದೆ. ಆದರ್ಶ ವ್ಯಕ್ತಿತ್ವದಿಂದ ಜನ ಮನ್ನಣೆಗೆ ಪಾತ್ರರಾಗುವಿರಿ. ಎಲ್ಲ ಕೆಲಸಗಳೂ ಸಕಾಲದಲ್ಲಿ ಪೂರ್ಣವಾಗುವವು. ಕೌಟುಂಬಿಕ ವಿವಾದ ಕೊನೆಗೊಳ್ಳುವುದು. ಶುಭ ಸಂಖ್ಯೆ: 7

ತುಲಾ: ಮಹತ್ವಾಕಾಂಕ್ಷೆಗೆ ಪೂರಕವಾದ ವಾತಾವರಣ ಇರುವುದು. ಬಂಧುಮಿತ್ರರ ಸಹಕಾರ ದೊರೆಯುವದು. ಉದ್ಯೋಗದಲ್ಲಿ ಪ್ರಗತಿ ಕಂಡುಬರುವದು. ಮನೆಯಲ್ಲಿ ಸಂತಸ ಮೂಡುವುದು. ಶುಭಕಾರ್ಯಗಳು ಜರುಗುವವು. ಶುಭ ಸಂಖ್ಯೆ: 3

ವೃಶ್ಚಿಕ: ಕೆಲಸದಲ್ಲಿ ವಿಘ್ನ ಉಂಟಾಗುವ ಸಾಧ್ಯತೆ ಇರುವುದು. ಎಚ್ಚರಿಕೆವಹಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ ಉದ್ಯೋಗದಲ್ಲಿ ಕಿರಿಕಿರಿ ಕಂಡುಬರುವುದು. ಗೊಂದಲಕ್ಕೆ ಒಳಗಾಗದೇ ಮುನ್ನುಗ್ಗಿರಿ. ಕೊಟ್ಟಸಾಲ ಪಾವತಿಯಾಗುವುದು. ಶುಭ ಸಂಖ್ಯೆ: 9

ಧನು: ನಿಧಾನವಾಗಿ ಕಾರ್ಯಸಿದ್ಧಿಯಾಗುವುದು. ಮಕ್ಕಳಲ್ಲಿ ಹೊಸಹುರುಪು ಕಂಡು ಬರುವುದು. ವ್ಯಾಪಾರಿಗಳಿಗೆ ಮಧ್ಯಮಫಲ. ಸೀಮಿತ ಆದಾಯ, ಸೀಮಿತ ಕಾರ್ಯಗಳಿಂದ ಬೇಸರ ಇರುವುದು. ಮಂದಗತಿಯ ಕೆಲಸಗಳು ನಿರಾಸೆ ಮೂಡಿಸುವ ಸಾಧ್ಯತೆ ಇದೆ. ಶಾಂತಚಿತ್ತರಾಗಿ ವ್ಯವಹರಿಸಿರಿ. ಶುಭ ಸಂಖ್ಯೆ: 1

ಮಕರ: ಮಿತ್ರರ ಸಕಾರಾತ್ಮಕ ಧೋರಣೆಯಿಂದ ವ್ಯವಹಾರಿಕ ಅಭಿವೃದ್ಧಿ ಕಂಡು ಬರುವುದು. ಕುಟುಂಬದ ಜವಾಬ್ದಾರಿ ಹೆಚ್ಚುವುದು. ಮಕ್ಕಳ ವಿದ್ಯಾಬ್ಯಾಸ ಹಾಗೂ ಆರೋಗ್ಯದ ಚಿಂತೆ ಕಂಡುಬರುವುದು. ನಿರ್ಲಕ್ಷತೆ, ಕೆಲಸ ಮುಂದೂಡುವ ಸ್ವಭಾವದಿಂದ ಹಾನಿ ಸಂಭವ. ಶುಭ ಸಂಖ್ಯೆ: 8

ಕುಂಭ: ಹೊಸ ಯೋಜನೆಗಳು ಬೇಡ. ಸ್ಥಳಾಂತರ, ವರ್ಗಾವಣೆ, ಮನೆ ಬದಲಿ, ಅಧಿಕಾರಿ ವರ್ಗದವರಿಂದ ಕಿರಿಕಿರಿ ಇರುವುದು. ಕೊಟ್ಟ ಸಾಲ ಮರುಪಾವತಿ ಆಗಲಾರದು, ವ್ಯಾಪರಿಗಳಿಗೆ ವ್ಯವಹಾರಿಕ ತೊಂದರೆ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 5

ಮೀನ: ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ. ಶುಭ ಸಂಖ್ಯೆ: 7

- Advertisement -
spot_img

Latest News

error: Content is protected !!