Thursday, June 4, 2026
Homeಕರಾವಳಿಪುತ್ತೂರಿನಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮಹಿಳೆ ಸಾವು‌

ಪುತ್ತೂರಿನಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮಹಿಳೆ ಸಾವು‌

- Advertisement -
- Advertisement -

ಪುತ್ತೂರು: ಆಕಸ್ಮಿಕವಾಗಿ ತೋಟದ ಕೆರೆಗೆ ಬಿದ್ದು  ಮಹಿಳೆಯೊಬ್ಬರು ಸಾವನ್ನಪ್ಪಿರುವ  ಘಟನೆ ಇಂದು ಬೆಳಗ್ಗೆ  ಪುತ್ತೂರಿನ ವೀರಮಂಗಲ ಸಮೀಪ ನಡೆದಿದೆ.

ವೀರಮಂಗಲ ನಿವಾಸಿ ಕೃಷ್ಣಪ್ಪ ಎಂಬವರ ಪತ್ನಿ ಅಕ್ಕಮ್ಮ ಎಂಬವರು ಮೃತಪಟ್ಟವರು.

ಬೆಳಿಗ್ಗೆ ಮನೆಯಿಂದ ನೀರು ತರಲೆಂದು ತೋಟದ ಕೆರೆಯ ಪಕ್ಕಕ್ಕೆ ಹೋದ ವೇಳೆ  ಆಕಸ್ಮಿಕವಾಗಿ ಕರೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ನೀರು ತರಲು ಹೋದವರು  ಇನ್ನೂ ಬಾರದ ಹಿನ್ನೆಲೆಯಲ್ಲಿ ಮನೆ ಮಂದಿ ಹುಡುಕಾಟ ನಡೆಸಿದರು. ಈ ಸಂದರ್ಭ ಅವರ ಮೃತ ದೇಹ ತೋಟದ ಕೆರೆಯಲ್ಲಿ ಪತ್ತೆಯಾಗಿದೆ.

ಇತ್ತೀಚೆಗಷ್ಟೆ ಅಕ್ಕಮ್ಮ ದಂಪತಿಯ ಪುತ್ರ ಚಂದ್ರಶೇಖರ್ ಅನಾರೋಗ್ಯದಿಂದ ಮೃತಪಟ್ಟಿದ್ದರು.

- Advertisement -

Latest News

error: Content is protected !!