- Advertisement -
- Advertisement -
ವಿಟ್ಲ: ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲದ ಕಸಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ನಡೆದಿದೆ.
ಬಾಲಕೃಷ್ಣ ಎಂಬವರ ಪತ್ನಿ ವನಿತಾ ಆತ್ಮಹತ್ಯೆಗೆ ಶರಣಾದವರು. ಇವರು ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಜೊತೆಗೆ ಮೂರು ವರ್ಷದ ವಿಕಲಚೇತನ ಹೆಣ್ಣು ಮಗುವಿದೆ. ಮತ್ತಿಬ್ಬರು ಹೆಣ್ಣುಮಕ್ಕಳನ್ನು ಕನ್ಯಾನದ ಭಾರತ ಸೇವಾಶ್ರಮಕ್ಕೆ ಸೇರಿಸಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದು, ಪತಿ ಪತ್ನಿ ಇಬ್ಬರೂ ಕುಡಿತದ ಚಟ ಹೊಂದಿದ್ದರು ಎನ್ನಲಾಗಿದೆ.
ಇನ್ನು ನಿನ್ನೆ ರಾತ್ರಿ ಪತಿ-ಪತ್ನಿ ಇಬ್ಬರ ನಡುವೆ ಜಗಳವಾಗಿದೆ.ಆ ಬಳಿಕ ವನಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಟ್ಲ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
- Advertisement -